Kannada NewsLatest

ನಕಲಿ ಬಂಗಾರದ ಆಭರಣ ಬ್ಯಾಂಕಿಗೆ ಅಡವಿಟ್ಟು ವಂಚಿಸುತ್ತಿದ್ದ ಖತರ್ನಾಕ್ ಜಾಲ ಭೇದಿಸಿದ ಪೊಲೀಸರು

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ; ನಕಲಿ ಚಿನ್ನದ ಆಭರಣಗಳನ್ನು ಅಸಲಿ ಎಂದು ನಂಬಿಸುತ್ತಿದ್ದ ಜಾಲವೊಂದನ್ನು ಭೇದಿಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರು ಆರೋಪಿಗಳನ್ನು ತೀವ್ರ ತನಿಖೆಗೆ ಒಳಪಡಸಿದ್ದಾರೆ.

ಆರೋಪಿಗಳು ನಕಲಿ ಆಭರಣಗಳಿಗೆ ಹಾಲ್ ಮಾರ್ಕ್ ಹಾಕಿ ಅಸಲಿ ಎಂದು ನಂಬಿಸಿ ಬ್ಯಾಂಕುಗಳಲ್ಲಿ ಅಡವಿಟ್ಟು ಸಾಲ ಪಡೆಯುತ್ತಿದ್ದರು.

ಬೋಜದ ಶ್ರೀ ಬೀರೇಶ್ವರ ಕೊ ಆಪ್. ಬ್ಯಾಂಕಿನ ಮ್ಯಾನೇಜರ್, ಆನಂದ ಚಿದಾನಂತ ಕಮತೆ ಎಂಬುವವರು ತಮ್ಮ ಬ್ಯಾಂಕಿಗೆ ದಾದಾಸಾಹೇಬ ದತ್ತು ತಿಲಕ ಎಂಬುವವರು ನಕಲಿ ಚಿನ್ನಕ್ಕೆ ಹಾಲ್ ಮಾರ್ಕ ಹಾಕಿ ಅಸಲಿ ಎಂದು ನಂಬಿಸಿ ೨.೭೫ ಲಕ್ಷ ರೂ. ಸಾಲ ಪಡೆದಿದ್ದಾರೆ ಎಂದು ಯಕ್ಸಂಬಾ ಠಾಣೆಗೆ ದೂರು ನೀಡಿದ್ದು, ಈ ಪ್ರಕರಣದ ತನಿಖೆಯ ವೇಳೆ ಇದರ ಹಿಂದೆ ದೊಡ್ಡ ವಂಚಕರ ಜಾಲವಿರುವುದು ಪತ್ತೆಯಾಗಿದೆ.

ಆರೋಪಿಗಳಾದ ಕೊಲ್ಲಾಪುರದ ಅಮೂಲ ಗಣಪತಿ ಪೋತದಾರ ಹಾಗೂ ರಾಜಸ್ಥಾನ ಜೈಪುರ ಮೂಲದ ಪಪ್ಪು ಮದನಲಾಲ ಎಂಬುವವರನ್ನು ಬಂಧಿಸಲಾಗಿದ್ದು, ಇಚಲಕರಂಜಿಯ ಓಂಕಾರ ಚಂದ್ರಕಾಂತ ದಬಾಡೆ, ಗಣೇಶ ನೇಮಿನಾಥ ಗೋಡಕೆ, ಚಂದು ಗಜಾಜ ಚೋರಗೆ, ಗೌಸಪಾಕ್ ಅಬ್ದುಲ್‌ರಜಾಕ್ ಜಮಾದಾರ, ಕೊಲ್ಲಾಪುರದ ಸುಹಾಸ ಸತ್ತಪ್ಪ ಮೋಹಿತೆ ಹಾಗೂ ಅಥಣಿಯ ಫರಿದ ಅಬ್ದುಲ್ ಮಕಾಂದಾರ ಅವರನ್ನು ತೀವ್ರ ತನಿಖೆಗೆ ಒಳಪಡಿಸಿದ್ದಾರೆ.

ಪೊಲೀಸರ ತನಿಖೆಯ ವೇಳೆ ಆರೋಪಿಗಳು, ಜನತಾ ಕೋ ಆಪರೆಟವ್ ಕ್ರೇಡಿಟ್ ಸೊಸೈಟಿ ಬೋರಗಾಂವ, ಶ್ರೀ ಭೈರವನಾಥ ಕೋ ಆಪರೆಟವ್ ಕ್ರೇಡಿಟ್ ಸೊಸೈಟಿ ಮಾಂಗೂರ, ಹೆಬ್ಬಾಳ ಅರ್ಬನ್ ಕ್ರೇಡಿಟ್ ಸೌಹಾರ್ದ ಸಹಕಾರಿ ಹೆಬ್ಬಾಳ, ಕರ್ನಾಟಕ ಕೋ ಆಪರೆಟಿವ್ ಕ್ರೇಡಿಟ್ ಸೊಸಾಯಿಟಿ ರಾಯಬಾಗ, ಹೆಚ್.ಡಿ.ಎಪ್.ಸಿ ಬ್ಯಾಂಕ್ ಚಿಕ್ಕೋಡಿ, ಎಂ. ಎ. ಈ. ಫೈನಾನ್ಸ್ ಕಂ. ಚಿಕ್ಕೋಡಿ, ಐ.ಸಿ.ಐ.ಸಿ.ಐ. ಬ್ಯಾಂಕ್ ಚಿಕ್ಕೋಡಿ, ಎಕ್ಸಿಸ್ ಬ್ಯಾಂಕ್ ಬೈಲಹೊಂಗಲ, ಎಕ್ಸಿಸ್ ಬ್ಯಾಂಕ್ ನಿಪ್ಪಾಣಿ, ಹಾಗೂ ಶ್ರೀ ಬೀರೇಶ್ವರ ಕೋ-ಆಪ್ ಕ್ರೇ ಸೊಸೈಟಿ ಯಕ್ಸಂಬಾ ಶಾಖೆ ಭೋಜ, ಇವುಗಳಲ್ಲಿ ಇದೇ ಮಾದರಿಯ ಅಪರಾಧವೆಸಗಿರುವುದು ಪತ್ತೆಯಾಗಿದೆ.

ಚಿಕ್ಕೋಡಿ ಡಿವೈಎಸ್‌ಪಿ ಬಸವರಾಜ ಯಲಿಗಾರ ಮಾರ್ಗದರ್ಶನದಲ್ಲಿ ಸಿಪಿಐ ಆರ್. ಆರ್. ಪಾಟೀಲ ನೇತ್ರತ್ವದಲ್ಲಿ, ಸದಲಗಾ ಪಿಎಸ್‌ಐ ಯಮನಪ್ಪ ಮಾಂಗ, ಪಿಎಸ್‌ಐ ಪ್ರವೀಣ ಬೆಳಗಿ ಮತ್ತು ಸಿಬ್ಬಂದಿಯ ತಂಡ ತನಿಖೆಯನ್ನು ಮುಂದುವರೆಸಿದೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿಕೆ ಖಂಡಿಸಿ ನಿಪ್ಪಾಣಿಯಲ್ಲಿ ಬೃಹತ್ ಪ್ರತಿಭಟನೆ

https://pragati.taskdun.com/politics/shashikala-jolleprotestchikkodisatish-jarakiholi/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button