Kannada NewsKarnataka NewsLatest

ಖತರ್ನಾಕ್ ಕಳ್ಳರ ಗ್ಯಾಂಗ್ ಪೊಲೀಸ್ ವಶಕ್ಕೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ದೊಡ್ಡ ದೊಡ್ಡ ವಾಹನಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಮೂವರು ಖತರ್ನಾಕ್ ಕಳ್ಳರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.

ಸೊಲ್ಲಾಪುರ, ಬೆಂಗಳೂರು ಹಾಗೂ ಹುಬ್ಬಳ್ಳಿಗಳಲ್ಲಿ ವಾಹನಗಳನ್ನು ಕದ್ದು, ಅದರ ಎಂಜಿನ್ ನಂಬರ್ ಮತ್ತು ಚೆಸ್ಸಿ ನಂಬರ್ ಬದಲಿಸಿ ಮಾರಾಟ ಮಾಡುತ್ತಿದ್ದರು. 12 ಗಾಲಿ ಟ್ರಕ್, ಮಹಿಂದ್ರಾ ಬೊಲೇರೋ ಪಿಕ್ ಅಪ್ ಟ್ರಕ್, ಮಹೀಂದ್ರಾ ಜೀಪ್ ಹಾಗೂ ಮಹಿಂದ್ರಾ ಸ್ಕಾರ್ಪಿಯೋ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ರಾಯಬಾಗ ತಾಲೂಕು ಖಣದಾಳದ ವಾಸುದೇವ ಸಹದೇವ ನಾಯಿಕ (34), ಮೂಡಲಗಿ ಖಾನಟ್ಟಿಯ ಮಹಾಂತೇಶ ಯಲ್ಲಪ್ಪ ಕರಗಣ್ಣಿ (24) ಹಾಗೂ ಮೂಡಲಗಿ ರಾಜಾಪುರದ ವಿವೇಕಾನಂದ ಚೌಡಯ್ಯ ತಳವಾರ (20) ಬಂಧಿತರು.

ಡಿಸಿಬಿ ಇನಸ್ಪೆಕ್ಟರ್ ವೀರೇಶ ದೊಡ್ಡಮನಿ ನೇತೃತ್ವದ ಪೊಲೀಸರ ತಂಡ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

Home add -Advt

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button