ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಮಲಪ್ರಭಾ ಘಾಟ್‌ನಲ್ಲಿ ಪರ್ಯಾವರಣ ಗತಿವೀಧಿ ಮತ್ತು ದತ್ತ ಪೀಠದ ಸಮನ್ವಯದಲ್ಲಿ ಮಲಪ್ರಭಾ ಆರತಿ ಮಾಡಲಾಯಿತು.
ವೇದಿಕೆಯಲ್ಲಿ ರಾಮನಾಥ ನಾಯಕ್, ಶ್ರೀ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ, ಡಾ.ಗೌರೀಶ್ ಭಾಲ್ಕೇಕರ್ ಉಪಸ್ಥಿತರಿದ್ದರು.
ರಾಮನಾಥ್ ನಾಯಕ್ ಜಿ ಅವರು ನೆರೆದಿದ್ದ ಜನರನ್ನು ಉದ್ದೇಶಿಸಿ ನಮ್ಮ ಪ್ರಾಚೀನ ನದಿ ಪೂಜೆಯ ಇತಿಹಾಸವನ್ನು ಗಂಗಾ ಪೂಜೆ ನೆನಪಿಸುತ್ತದೆ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸಲು ಗಂಗಾ ಆರತಿ ಎಂದು ಹೇಳಿದರು.
ಡಾ.ಗೌರೀಶ್ ಭಾಲ್ಕೇಕರ್ ಅವರು ನಮ್ಮ ಪುರಾತನ ಸಂಪ್ರದಾಯಗಳನ್ನು ಉಳಿಸುವ ಸ್ತ್ರೀ ಶಕ್ತಿಯ ಬಗ್ಗೆ ಮಾತನಾಡಿದರು.
ಶ್ರೀ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ಗಂಗಾಪೂಜೆಯ ಮಹತ್ವದ ಕುರಿತು ಮಾತನಾಡಿದರು. ಖಾನಾಪುರದಲ್ಲಿ ಗಂಗಾಪೂಜೆ ನೆರವೇರಿಸಲು ಶ್ರಮಿಸಿದ್ದಾರೆ ಎಂದು ಶ್ಲಾಘಿಸಿದರು.
ಡಾ. ಸೋನಾಲಿ ಸರ್ನೋಬತ್, ವಾಣಿ ರಮೇಶ್, ದಾನೇಶ್ವರಿ ಪಾಡೇಕರ್ ಉಪಸ್ಥಿತರಿದ್ದರು.
ಸುಮಾರು ಐದು ಸಾವಿರ ಜನರು ಜಮಾಯಿಸಿದ್ದರು. ನಂತರ ತುಪ್ಪದ ದಿಯಾಗಳನ್ನು ನದಿಯಲ್ಲಿ ತೇಲಿಸಲಾಯಿತು. ಖಾನಾಪುರದವರಿಗೆ ಇದೊಂದು ವಿನೂತನ ಅನುಭವ ನೀಡಿತು.
https://pragati.taskdun.com/cm-basavaraj-bommaistona-202315th-international-granite-and-stone-exhibition/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ