ಶ್ರೀಶೈಲ ಜಗದ್ಗುರುಗಳಿಂದ ಕೃಷ್ಣಾ ನದಿಗೆ ಗಂಗಾ ಪೂಜೆ, ಬಾಗಿನ ಅರ್ಪಣೆ
ಪ್ರಗತಿವಾಹಿನಿ ಸುದ್ದಿ, ಮಾಂಜರಿ –
ತುಂಬಿ ಹರಿಯುತ್ತಿರುವ ಕೃಷ್ಣಾ ನದಿಗೆ ಇಂದು ಶ್ರೀಶೈಲ ಪೀಠದ ಜಗದ್ಗುರುಗಳು ಹಾಗೂ ಯಡೂರಿನ ಕಾಡಸಿದ್ದೇಶ್ವರ ಸಂಸ್ಥಾನ ಮಠ ಮತ್ತು ವೀರಭದ್ರ ದೇವಸ್ಥಾನದ ಧರ್ಮಾಧಿಕಾರಿಗಳಾದ ಡಾ|| ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ಹಾಗೂ ಯಡುರಿನ ಪಾಠ ಶಾಲೆಯ ವೇದ ಮೂರ್ತಿಗಳ ಹಸ್ತದಿಂದ ಪ್ರಸಕ್ತ ಸಾಲಿನ ಮಳೆಗಾಲದಲ್ಲಿ ಸಮರ್ಪಕ ಮಳೆ ಸುರಿದು ಕೃಷ್ಣಾ ನದಿ ತುಂಬಿ ಹರಿಯುತ್ತಿರುವುದರಿಂದ ಶನಿವಾರ ಗಂಗಾ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.
ಪ್ರಾರಂಭದಲ್ಲಿ ಯಡೂರಿನ ಪಾಠಶಾಲೆಯ ವೆದಮೂರ್ತಿಗಳಿಂದ ನದಿಯ ಪೂಜೆ ನೆರವೇರಿತು. ಈ ವರ್ಷ ಮಳೆಯ ಪ್ರಮಾಣ ಹೆಚ್ಚಿಗೆ ಆಗಿ ನದಿಗಳು ತುಂಬಿ ಹರಿಯುತ್ತಿರುವುದರಿಂದ ರೈತರಿಗೆ ಅನೂಕೂಲ ವಾಗಿದ್ದರಿಂದ ಗ್ರಾಮದ ಕೃಷ್ಣಾ ನದಿಯ ಪಾತ್ರ ತುಂಬಿ ಹರಿಯುತ್ತಿದ್ದು, ಯಡೂರ ಸುತ್ತ ಮುತ್ತಲಿನ ಪರಿಸರ ಹಸಿರುಮಯವಾಗಿದೆ, ಮಳೆ ಹೆಚ್ಚಿಗೆ ಆಗಿದ್ದರಿಂದ ಪರಿಸರದ ರೈತರು ಮತ್ತು ಸಾರ್ವಜನಿಕರು ಕೃಷ್ಣಾ ನದಿಗೆ ಬಾಗಿನ ಅರ್ಪಿಸಿ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶ್ರೀಶೈಲ ಗುರುಜಿ, ಅಣ್ಣಯ್ಯಾ ಪೂಜಾರಿ, ಮಹಾಲಿಂಗಯ್ಯಾ ಬ್ರೀಂಗಿ, ಮುತ್ತಯ್ಯಾ ಮಠದ, ಅಡವಯ್ಯಾ ಅರಳಿಕಟ್ಟಿಮಠ, ಮಾರುತಿ ಕೋಕಣೆ, ಮಲ್ಲಯ್ಯಾ ಶಾಸ್ತ್ರಿ ಜಡೆ, ಮಂಜುದೆವರು, ಸುನಿಲ ಹೊಸಮನಿ, ಮಹಾದೇವ ಲಕ್ಕಾಪಗೋಳ, ರಾಜಶೇಖರ ಮಗದುಮ್ಮ, ಮನೋಹರ ಫೂಟಾಣೆ, ದೀಪಕ ಕಮತೆ, ನರಸಗೌಡಾ ಕಮತೆ, ಜನ್ನಪ್ಪಾ ಹಕಾರೆ, ನರಸಗೌಡಾ ಫಾಟೀಲ, ಸಚಿನ ಪಾಟೀಲ, ಸಂಜಯ ಪಾಟೀಲ, ಈರಗೌಡಾ ಫಾಟೀಲ ಹಾಗೂ ಇನ್ನಿತರರು ಉಪಸ್ತಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ