ಪ್ರಗತಿ ವಾಹಿನಿ ಸುದ್ದಿ ಪಾಟ್ನಾ: ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಚಾಲನೆ ನೀಡಿದ್ದ ಒಳ ನಾಡು ಜಲ ಸಾರಿಗೆಯ ಐಶಾರಾಮಿ ಹಡಗು ಗಂಗಾ ವಿಲಾಸ ಮೂರನೇ ದಿನಕ್ಕೆ ಸ್ಥಗಿತಗೊಂಡಿದೆ.
ಎಂವಿ ಗಂಗಾವಿಲಾಸ ಹಡಗಿಗೆ ಬಿಹಾರದ ಛಾಪ್ರಾ ಬಳಿ ಗಂಗಾ ನದಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಪ್ರಯಾಣಿಕರನ್ನು ಹೊತ್ತ ಈ ಕ್ರೂಸ್ 51 ದಿನಗಳ ಪ್ರಯಾಣ ನಡೆಸಬೇಕಿತ್ತು.
ಆದರೆ ಗಂಗಾ ನದಿಯಲ್ಲಿ ನೀರಿನ ಆಳ ಕಡಿಮೆಯಾದ ಕಾರಣ ಹಡಗು ಸಂಚಾರ ನಡೆಸಲು ಸಾಧ್ಯವಾಗಿಲ್ಲ. ಹಾಗಾಗಿ ಚಾಲನೆ ನೀಡಿದ ಮೂರನೇ ದಿನಕ್ಕೇ ಸಂಚಾರ ಸ್ಥಗಿತಗೊಂಡಿದೆ.
ಪ್ರಯಾಣಿಕರನ್ನು ಎಸ್‍ಡಿಆರ್‍ಎಫ್ ತಂಡ ರಕ್ಷಿಸಿ ಸಣ್ಣ ಬೋಟ್‍ಗಳ ಮೂಲಕ ದಡ ತಲುಪಿಸಿದೆ.
ಜೂನ್ ವೇಳೆಗೆ ಭಾರತದಲ್ಲಿ ಭಾರಿ ಆರ್ಥಿಕ ಹಿಂಜರಿತ
https://pragati.taskdun.com/recession-will-hits-india-by-june-narayan-rane/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ