
ಮೃತರ ಮನೆಗೆ ತೆರಳಿ ಗೌರವ ನಮನ ಸಲ್ಲಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಪ್ರಗತಿವಾಹಿನಿ ಸುದ್ದಿ: ಶತಾಯುಷಿ, ಹಿರೇಬಾಗೇವಾಡಿ ಗ್ರಾಮದ ಹಿರಿಯರಾಗಿದ್ದ ಗಂಗಪ್ಪ ವಾಲಿಇಟಗಿ ವಿಧಿವಶರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಗಂಗಪ್ಪ ವಾಲಿಇಟಗಿ ನಿಧನರಾಗಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಮೃತರ ಮನೆಗೆ ತೆರಳಿ ಮೃತ ಗಂಗಪ್ಪ ವಾಲಿಇಟಗಿ ಅವರ ಅಂತಿಮ ದರ್ಶನ ಪಡೆದು, ಗೌರವ ನಮನ ಸಲ್ಲಿಸಿದರು. ಇದೇ ವೇಳೆ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.
 
					 
				 
					 
					 
					 
					
 
					 
					 
					


