Kannada NewsKarnataka News

ಬೆಳಗಾವಿ ಕ್ಯಾಂಪ್ ಪೊಲೀಸ್‌ರಿಂದ ಗಾಂಜಾ ಮಾರಾಟಗಾರರ ಮೇಲೆ ದಾಳಿ; ಇಬ್ಬರ ಬಂಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಗರದ ಕಾಲೇಜು ರಸ್ತೆಯ ಹೋಟೆಲ್ ಒಂದರ ಬಳಿ  ಗಾಂಜಾ ಮಾರಾಟದಲ್ಲಿ ತೊಡಗಿದ್ದ ಇಬ್ಬರನ್ನು ಪೊಲೀಸರು ಸೋಮವಾರ  ಬಂಧಿಸಿದ್ದಾರೆ.

ಬೆಳಗಾವಿ ಶಹಾಪುರದ  ಜೇಡಗಲ್ಲಿ ನಿವಾಸಿ ಪ್ರದೀಪ ಲವಕುಶ ಹುಬ್ಬಳ್ಳಿ (27), ಬಾಗಲಕೋಟ ಜಿಲ್ಲೆ ಗುಳೇದಗುಡ್ಡ ಮೂಲದ, ಸದ್ಯ ಜೇಡಗಲ್ಲಿಯಲ್ಲಿ ವಾಸವಾಗಿದ್ದ ವಿಜಯಕುಮಾರ ವೀರಭದ್ರಪ್ಪ ತಾಂಡೂರ (25)  ಬಂಧಿತ ಆರೋಪಿಗಳು.

 ಆರೋಪಿಗಳಿಂದ 27,424  ರೂ. ಮೌಲ್ಯದ 1 ಕೆಜಿ. 705 ಗ್ರಾಂ ತೂಕದ ಗಾಂಜಾ ಗಾಂಜಾ, ದ್ವಿಚಕ್ರ ವಾಹನಗಳು,  ಮೊಬೈಲ್ ಫೋನ್  ಹಾಗೂ  1,28,780 ರೂ. ನಗದು   ಜಪ್ತತಿ ಮಾಡಿ ತನಿಖೆ ಮುಂದುವರೆಸಲಾಗಿದೆ.

ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಕ್ಯಾಂಪ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್  ಪ್ರಭಾಕರ ಎಸ್ ಧರ್ಮಟ್ಟಿ, ನೇತೃತ್ವದ ತಂಡ  ಕಾರ್ಯಾಚರಣೆ ನಡೆಸಿದೆ.  ಈ ಪ್ರಕರಣವನ್ನು ಭೇದಿಸಿದ ತಂಡದ ಕಾರ್ಯವನ್ನು ಪೊಲೀಸ್ ಆಯುಕ್ತರು ಹಾಗೂ ಪೊಲೀಸ್ ಉಪ ಆಯುಕ್ತರು ಶ್ಲಾಘಿಸಿದ್ದಾರೆ.

Home add -Advt

ಕಾಶಿ ಯಾತ್ರಾರ್ಥಿಗಳಿಗೆ ವಿಶೇಷ ರೈಲು ವ್ಯವಸ್ಥೆ; 5,000 ಸಹಾಯಧನ; ಇಲ್ಲಿದೆ ಸಂಪೂರ್ಣ ಮಾಹಿತಿ

 

Related Articles

Back to top button