Belagavi NewsBelgaum NewsCrimeKannada NewsKarnataka NewsLatestNational

*ಗಾಂಜಾ ಕೇಸ್: ಗೆಜ್ಜಿಸ್ವಾಮಿ ಸೇರಿ ಮೂವರು ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಮದುರ್ಗ ತಾಲೂಕಿನ ಹುಲಕುಂದ ಗ್ರಾಮದ ಉಳೇಶ್ವರ ಗುಡಿಯ ಸಮೀಪ ಗಾಂಜಾ ಮಾರಾಟ ಮಾಡುತ್ತಿದ ಮೂವರನ್ನು ಕಟಕೋಳ ಪೊಲೀಸರು ಬಂಧಿಸಿದ್ದಾರೆ.‌

ಖಚಿತ ಮಾಹಿತಿ ಮೇರೆಗೆ ಠಾಣೆಯ ಅಪರಾಧ ಸಂಖ್ಯೆ:17/2026 ಕಲಂ:20(ಬಿ) ಎನ್‌ಡಿಪಿಎಸ್ ಕಾಯ್ದೆ-1985 ರಡ್ಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖಾಧಿಖಾರಿಯಾದ ಬಸವರಾಜ ಕೊಣ್ಣೂರೆ ಪಿಎಸ್‌ಐ ಹಾಗೂ ಸಿಬ್ಬಂದಿ ದಾಳಿ ಮಾಡಿದಾಗ ಮೂವರನ್ನು ಬಂಧಿಸಿದ್ದಾರೆ. 

ಶಿವಪುತ್ರಪ್ಪ ಹನಮಪ್ಪ ಹಡಪದ (ಗೆಜ್ಜಿಸ್ವಾಮಿ), ಪುಂಡಲೀಕಪ್ಪ ಹಣಮಂತಪ್ಪ ಶೆಟ್ಟೆಪ್ಪನವರ, ಯಲ್ಲಪ್ಪ ಬಾಳಪ್ಪ ಶೀಂತ್ರಿ ಎಂಬ ಮೂವರನ್ನು ಬಂಧಿಸಲಾಗಿದೆ.‌

ದಾಳಿಯಲ್ಲಿ 25,000 ರೂ ಮೌಲ್ಯದ ಒಟ್ಟು 263 ಗ್ರಾಂ ಗಾಂಜಾ, ಹಾಗೂ ಗಾಂಜಾ ಮಾರಾಟ ಮಾಡಿದ ಒಟ್ಟು ಹಣ  3,400 ರೂ ಹಾಗೂ ಕೃತ್ಯಕ್ಕೆ ಬಳಿಸಿದ ಬೈಕ್ ಜಪ್ತಿ ಮಾಡಿಕೊಂಡು ಮುಂದಿನ ತನಿಖೆ ಕೈಕೊಳ್ಳಾಗಿದೆ.

Home add -Advt

Related Articles

Back to top button