
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: “ಗ್ರಂಥಾಲಯಗಳು ಜ್ಞಾನದ ಕೇಂದ್ರವಾಗಿರುವಂತೆ ಉದ್ಯಾನಗಳು ಮನಶಾಂತಿ ನೀಡುವ ಸ್ಥಳಗಳಾಗಿವೆ. ಉದ್ಯಾನದಲ್ಲಿ ವಿಹರಿಸುವುದರಿಂದ ಮನಸ್ಸು ಪ್ರಫುಲ್ಲಿತಗೊಂಡು ದೇಹಕ್ಕೂ ಚೈತನ್ಯ ಸಿಗುತ್ತದೆ” ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಅವರು, ಗ್ರಾಮೀಣ ಕ್ಷೇತ್ರದ ಹಿಂಡಲಗಾ ವಿಜಯ ನಗರ, ರಕ್ಷಕ್ ಕಾಲನಿ ಹಾಗೂ ದತ್ತಮಂದಿರದ ಆವರಣ ಸೇರಿದಂತೆ ತಲಾ 50 ಲಕ್ಷ ವೆಚ್ಚದ ಮೂರು ಉದ್ಯಾನಗಳ ನಿರ್ಮಾಣಕ್ಕಾಗಿ ಸ್ಥಳೀಯ ನಿವಾಸಿಗಳ ಹಾಗೂ ಮುಖಂಡರ ಸಮ್ಮುಖದಲ್ಲಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
“ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದ್ದು ಇನ್ನೂ ಹೆಚ್ಚು ಅಭಿವೃದ್ಧಿ ಮೂಲಕ ಮಾದರಿ ಕ್ಷೇತ್ರವಾಗಿ ರೂಪುಗೊಳಿಸುವ ಉದ್ದೇಶ ಹೊಂದಲಾಗಿದೆ. ಇದಕ್ಕೆ ಸದಾ ಜನತೆಯ ಸಹಕಾರ, ಪ್ರೀತಿ ಇರಬೇಕು: ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ವಿಠ್ಠಲ ದೇಸಾಯಿ, ರಾಹುಲ ಉರಣಕರ, ಚೇತನಾ ಅಗಸ್ಗೆಕರ್, ಪ್ರವೀಣ ಪಾಟೀಲ, ಡಿ.ಬಿ. ಪಾಟೀಲ, ಗಜಾನನ ಬಾಂಡೇಕರ್, ಸೀಮಾ ದೇವಕರ, ರೇಣುಕಾ ಭಾತ್ಕಂಡೆ, ಅಲ್ಕಾ ಕಿತ್ತೂರ, ಪ್ರೇರಣಾ ಮೀರಜಕರ, ಗಜಾನನ ಕಣಬರಕರ, ತುಕಾರಾಮ ಫಡಕೆ, ಭರಮಣ್ಣ ಪಾಟೀಲ, ಸುನೀಲ ಶಿಂಧೆ, ಸದಾನಂದ ಶಿಂಧೆ, ಮೋಹನ ಸಾಂಬ್ರೆಕರ್, ವಿನಾಯಕ ಹರಿಹರ, ಸಂತೋಷ ಫರ್ನಾಂಡಿಸ್ ಹಾಗೂ ಮುಂತಾದವರು ಉಪಸ್ಥಿತರಿದ್ದರು.
ರಕ್ಷಕ್ ಕಾಲನಿ, ದತ್ತ ಮಂದಿರ ಆವರಣದಲ್ಲಿ:
ಹಿಂಡಲಗಾ ದತ್ತ ಮಂದಿರದ ಆವರಣ ಹಾಗೂ ರಕ್ಷಕ್ ಕಾಲನಿಯಲ್ಲಿ ಸಾರ್ವಜನಿಕ ನೂತನ ಉದ್ಯಾನ ನಿರ್ಮಾಣಕ್ಕಾಗಿ ತಲಾ 50 ಲಕ್ಷದಂತೆ 1ಕೋಟಿ ರೂ. ಮಂಜೂರಾಗಿದ್ದು ನಿರ್ಮಾಣದ ಕಾಮಗಾರಿಗಳಿಗೆ ಸ್ಥಳೀಯ ನಿವಾಸಿಗಳ ಹಾಗೂ ಮುಖಂಡರ ಸಮ್ಮುಖದಲ್ಲಿ ಲಕ್ಷ್ಮೀ ಹೆಬ್ಬಾಳಕರ ಭೂಮಿ ಪೂಜೆ ನೆರವೇರಿಸಿದರು.
ಇದೇ ಸಮಯದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಪೂಜೆಯನ್ನು ಕೈಗೊಳ್ಳುವ ಮೂಲಕ ಅನ್ನಪ್ರಸಾದಕ್ಕೆ ಚಾಲನೆ ನೀಡಿದರು.
ಶಾರ್ಟ್ ಸರ್ಕ್ಯೂಟ್ : ಅಂಗಡಿ ಸಂಪೂರ್ಣ ಧ್ವಂಸ
https://pragati.taskdun.com/short-circuit-the-shop-is-a-complete-wreck/
ಸುರ್ಜೇವಾಲಾ ಕಾಂಗ್ರೆಸ್ ಆಂತರಿಕ ಕಲಹವನ್ನು ಮೊದಲು ಪರಿಹರಿಸಿಕೊಳ್ಳಲಿ: ಸಿಎಂ ಬೊಮ್ಮಾಯಿ
https://pragati.taskdun.com/let-surjewala-to-solve-infighting-of-congress-first-cm-bommai/
ರೋಹಿಣಿ IAS V/s ರೂಪಾ IPS; ಜಾಲತಾಣಕ್ಕೂ ತಲುಪಿದ ಜಟಾಪಟಿ
https://pragati.taskdun.com/a-star-studded-fight-between-rohini-sindhuri-and-roopa-moudgil/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ