
ಕೇಂದ್ರದಿಂದಲೂ ಜನರಿಗೆ ಬೆಲೆ ಏರಿಕೆ ಬರೆ
ಪ್ರಗತಿವಾಹಿನಿ ಸುದ್ದಿ: ಪೆಟ್ರೋಲ್, ಡೀಸೆಲ್ ಅಬಕಾರಿ ಸುಂಕ ಲೀಟರ್ ಗೆ ೨ ರೂಪಾಯಿ ಹೆಚ್ಚಳ ಮಾಡಿದ್ದ ಕೇಂದ್ರ ಸರ್ಕಾರ ಇದೀಗ ದೇಶದ ಜನತೆಗೆ ಮತ್ತೊಂದು ಬೆಲೆ ಏರಿಕೆ ಬರೆ ಎಳೆದಿದೆ.
ಪೆಟ್ರೋಲ್, ಡೀಸೆಲ್ ಸುಂಕ ಹೆಚ್ಚಲ ಬೆನ್ನಲ್ಲೇ ಅಡುಗೆ ಅನಿಲ ದರವನ್ನು ಹೆಚ್ಚಳ ಮಾಡಿದೆ. ಮಾತ್ರವಲ್ಲ ಉಜ್ವಲ ಯೋಜನೆ ಅಡಿ ಸಿಗುವ ಸಿಲಿಂಡರ್ ದರದಲ್ಲಿಯೂ ಏರಿಕೆಯಾಗಿದೆ.
ಅಡುಗೆ ಅನಿಲ ದರ 50 ರೂಪಾಯಿ ಹೆಚ್ಚಳ ಮಾಡಲಾಗಿದೆ. ಅಲ್ಲದೇ ಉಜ್ವಲ ಯೋಜನೆ ಸಿಲಿಂಡರ್ ದರವನ್ನು ಕೂಡ 50 ರೂಪಾಯಿ ಹೆಚ್ಚಿಸಲಾಗಿದೆ. ಈ ಮೂಲಕ ಉಜ್ವಲ ಯೋಜನೆ ಅಡಿಯ ಸಿಲಿಂಡರ್ ದರ ಇನ್ಮುಂದೆ 550 ರೂಪಾಯಿ ಆಗಲಿದೆ.