Latest

*ಗವಿಗಂಗಾಧರೇಶ್ವರನ ಪಾದಸ್ಪರ್ಶಿಸಿದ ಸೂರ್ಯ ರಶ್ಮಿ; ವಿಸ್ಮಯ ಕಣ್ತುಂಬಿಕೊಂಡ ಭಕ್ತರು*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಕರ ಸಂಕ್ರಾಂತಿ ಶುಭ ಸಂದರ್ಭದಲ್ಲಿ ಬೆಂಗಳೂರಿನ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಸೂರ್ಯ ರಶ್ಮಿ ಶಿವನನ್ನು ಸ್ಪರ್ಶಿಸುವ ಮೂಲಕ ಮಹಾವಿಸ್ಮಯಕ್ಕೆ ಸಾಕ್ಷಿಯಾಯಿತು.

ಬೆಂಗಳೂರಿನ ಗವಿಪುರಂನಲ್ಲಿರುವ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಸೂರ್ಯ ರಶ್ಮಿ ಶಿವಲಿಂಗವನ್ನು ಸ್ಪರ್ಶಿಸಿದ್ದು, ಸಾವಿರಾರು ಭಕ್ತರು ಕೌತುಕದ ಕ್ಷಣಗಳನ್ನು ಕಣ್ತುಂಬಿಕೊಂಡರು. ದಕ್ಷಿನಾಯಣದಿಂದ ಉತ್ತರಾಯಣಕ್ಕೆ ಪಥವನ್ನು ಬದಲಿಸುವ ಸೂರ್ಯನಾರಾಯಣ ಗವಿಗಂಗಾಧರೇಶ್ವರ ಪಾದಸ್ಪರ್ಶ ಮಾಡಿ ನಮಸ್ಕರಿಸುವ ಮೂಲ ಪಥ ಬದಲಿಸಿದ್ದು ವಿಶೇಷ. ಇಂದು ಸಂಜೆ 5:20ರ ಸುಮಾರಿಗೆ ಸೂರ್ಯನ ಕಿರಣಗಳು ಗವಿಗಂಗಾಧರೇಶ್ವರನ ಎದುರಿನ ನಂದಿ ವಿಗ್ರಹ ಸ್ಪರ್ಶಿಸಿದ ಬಳಿಕ ಗರ್ಭಗುಡಿಯ ಕತ್ತಲನ್ನು ಸೀಳಿ ಪಾರ್ವತಿ ಮಾತೆಯ ದರ್ಶನ ಪಡೆದು ಶಿವಲಿಂಗವನ್ನು ಸ್ಪರ್ಶಿಸಿತು.

ಈ ಬಾರಿ ಯಾವುದೇ ಅಡೆ ತಡೆಗಳಿಲ್ಲದೇ ಸುದೀರ್ಘವಾಗಿ ಸೂರ್ಯನ ಕಿರಣಗಳು ಶಿವಲಿಂಗವನ್ನು ಸ್ಪರ್ಶಿಸಿದ್ದು, ಬೆಳಕಿನ ಪ್ರಖರತೆಯಲ್ಲಿ ಶಿವಲಿಂಗ ವಜ್ರದಂತೆ ಕಂಗೊಳಿಸಿದ್ದು ವಿಶೇಷವಾಗಿತ್ತು. ದೇವಸ್ಥಾನದಲ್ಲಿ ನೆರೆದಿದ್ದ ಸಾವಿರಾರು ಭಕ್ತರು ಮಹಾ ವಿಸ್ಮಯವನ್ನು ಕಣ್ತುಂಬಿಕೊಂದು ಪುನೀತರಾದರು.

ಈ ವೇಳೆ ಮಾತನಾಡಿದ ಗವಿಗಂಗಾಧರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಸೋಮಸುಂದರ್ ದೀಕ್ಷಿತ್, ಕಳೆದ ವರ್ಷ ಸೂರ್ಯರಶ್ಮಿ ಸಾಕಾರವಾಗಿರಲಿಲ್ಲ. ಈಬಾರಿ ಸೂರ್ಯದೇವನ ನಮಸ್ಕಾರ ಸಾಕಾರಗೊಂಡಿದೆ. ಸೂರ್ಯದೇವರು ಸುದೀರ್ಘವಾಗಿ ಯಾವುದೇ ಅಡೆತಡೆಯಿಲ್ಲದೇ ಶಿವಲಿಂಗವನ್ನು ಸ್ಪರ್ಶಿಸಿ ಪೂಜಿಸಿರುವುದು ವಿಶೇಷ. ಈ ಬಾರಿ 3 ನಿಮಿಷ 12 ಸೆಕೆಂಡುಗಳ ಕಾಲ ಸೂರ್ಯ ಕಿರಣಗಳು ಶಿವಲಿಂಗವನ್ನು ಸ್ಪರ್ಶಿಸಿವೆ. ಶಿವನ ಶಿರೋಭಾಗದಲ್ಲಿ ಸುದೀರ್ಘವಾಗಿ ಸೂರ್ಯನಕಿರಣಗಳು ಪೂರ್ಣಗೊಂಡಿದೆ. ಲೋಕಕಲ್ಯಾಣವಾಗಲಿದೆ. ಪ್ರಸ್ತವರ್ಷ ಯಾವುದೇ ತೊಂದರೆ, ಅನಾನುಕೂಲಗಳಾಗುವುದಿಲ್ಲ. ಎಲ್ಲರಿಗೂ ಒಳಿತಾಗಲಿದೆ ಎಂದು ತಿಳಿಸಿದ್ದಾರೆ.

*ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ವಿಚಾರ: ಯತ್ನಾಳ್ ಗೆ ಕರೆ ಮಾಡಿದ ಬಿಜೆಪಿ ಹೈಕಮಾಂಡ್ ಹೇಳಿದ್ದೇನು?*

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button