Kannada NewsLatest

ಜಿ ಐ ಟಿ ಕಾಲೇಜ್ ಗೆ ಜನರಲ್ ಚಾಂಪಿಯನ್ ಪ್ರಶಸ್ತಿ

ಜಿ ಐ ಟಿ ಕಾಲೇಜ್ ಗೆ ಜನರಲ್ ಚಾಂಪಿಯನ್ ಪ್ರಶಸ್ತಿ

  • ರಾಜ್ಯ ಮಟ್ಟದ ಇಂಜಿನಿಯರಿಂಗ್ ಪ್ರಾಜೆಕ್ಟ್ ಪ್ರದರ್ಶನದಲ್ಲಿ ಜಿ ಐ ಟಿ ಸಾಧನೆ.

ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (ಕೆಎಸ್ಸಿಎಸ್ಟಿ) ಪ್ರಾಯೋಜಿತ 42 ನೇ ರಾಜ್ಯ ಮಟ್ಟದ ಪ್ರಾಜೆಕ್ಟ್ ಪ್ರದರ್ಶನದಲ್ಲಿ ಬೆಳಗಾವಿಯ ಕೆ ಎಲ್ ಎಸ ಗೋಗಟೆ ತಾಂತ್ರಿಕ ಮಹಾವಿದ್ಯಾಲಯ (ಜಿ ಐ ಟಿ) ಜನರಲ್ ಚಾಂಪಿಯನಶಿಪ್ ಪ್ರಶಸ್ತಿಯನ್ನು ಮುಡಿಗೇರಿಸಕೊಂಡಿದೆ.

ಇತ್ತೀಚಿಗೆ ಬೆಳಗಾವಿಯ ಕೆ ಎಲ್ ಇ ಇಂಜಿನಿಯರಿಂಗ್ ಕಾಲೇಜನಲ್ಲಿ ಹಮ್ಮಿಕೊಂಡಿದ್ದ ಈ ಸ್ಪರ್ಧೆಯಲ್ಲಿ ಜಿ ಐ ಟಿ ಈ ಸಾಧನೆ ಮಾಡಿದೆ. ಜಿ ಐ ಟಿಯ ವಿವಿಧ ವಿಭಾಗಗಳಿಂದ ಒಟ್ಟು 17 ಪ್ರಾಜೆಕ್ಟ್ ಗಳು ಪ್ರಾಯೋಜಕತ್ವಕ್ಕಾಗಿ ಆಯ್ಕೆ ಮಾಡಲಾಗಿದ್ದು, ಅದರಲ್ಲಿ 11 ರಾಜ್ಯಮಟ್ಟದ ಪ್ರದರ್ಶನಕ್ಕೆ ಆಯ್ಕೆಯಾಗಿದ್ದವು.

ಅಕ್ಷಯ್ ಕುಮಾರ್ ಪಿ, ಹರೀಶ್ ಬಿ, ಅಕ್ಷಯ ಪಿ ಮತ್ತು ಗಿರೀಶ್ ಪಿ ವಿದ್ಯಾರ್ಥಿಗಳನ್ನ ಒಳಗೊಂಡ ಪ್ರಾಜೆಕ್ಟ್ ತಂಡ ಪ್ರಸ್ತುತ ಪಡಿಸಿದ “ಆನ್ ಎಕ್ಸ್ಪೀರಿಮೆಂಟಲ್ ಇನ್ವೆಸ್ಟಿಗೇಷನ್ ಆನ್ ಎಫೆಕ್ಟ್ ಆಫ್ ಯೂಸಿಂಗ್ ನಿಯರ್ ಡ್ರೈ ಮಸಿನಿಂಗ್ ಫಾರ್ ವರ್ಟಿಕಲ್ ಮಸಿನಿಂಗ್ ಸೆಂಟರ್ ? ಪ್ರಾಜೆಕ್ಟ್ ಗೆ ವರ್ಷದ ಅತ್ಯುತ್ತಮ ಪ್ರಾಜೆಕ್ಟ್ ಪ್ರಶಸ್ತಿ? ಅನ್ನು ಗೆದ್ದಿತು ಪ್ರೋ. ಹರ್ಷಿತ್ ಕುಲಕರ್ಣಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು.

ಸಂಕೇತ್ ಎಸ್, ಸಾಕ್ಷಿ ಕೆ, ಶ್ರವಣಕುಮಾರ್ ಕೆ ಮತ್ತು ಆದರ್ಶ್ ಪಾಟೀಲ್ ವಿದ್ಯಾರ್ಥಿಗಳನ್ನ ಒಳಗೊಂಡ ಮತ್ತೊಂದು ಪ್ರಾಜೆಕ್ಟ್ ತಂಡವು ?ಎಕ್ಸಾಸ್ಟ್ ಹೀಟ್ನಿಂದ ಥರ್ಮೊಎಲೆಕ್ಟ್ರಿಕ್ ಪವರ್ ಜನರೇಷನ್? ಪ್ರಾಜೆಕ್ಟ್ ಗಾಗಿ ?ವರ್ಷದ ಅತ್ಯುತ್ತಮ ಪ್ರಾಜೆಕ್ಟ್ ಪ್ರಶಸ್ತಿ? ಯನ್ನು ಬಾಚಿಗೊಂಡಿತು. ಡಾ. ಸಚಿನ್ ಕುಲಕರ್ಣಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು.

ಈ ಪ್ರದರ್ಶನದಲ್ಲಿ ಸುಮಾರು 160 ಕ್ಕಿಂತ ಹೆಚ್ಚಿನ ಇಂಜಿನಿಯರಿಂಗ್ ಕಾಲೇಜಿನಿಂದ 1200 ವಿದ್ಯಾರ್ಥಿಗಳನ್ನ ಒಳಗೊಂಡ 400 ಕ್ಕಿಂತ ಹೆಚ್ಚು ಪ್ರಾಜೆಕ್ಟ್ ತಂಡಗಳು ಭಾಗವಹಿಸಿದ್ದವು. ಕೆ ಎಲ್ ಎಸ ಕಾರ್ಯಧ್ಯಕ್ಷ ಶ್ರೀ ಎಂ. ಆರ್. ಕುಲಕರ್ಣಿ, ಜಿ ಐ ಟಿ ಆಡಳಿತ ಮಂಡಳಿ ಅಧ್ಯಕ್ಷ ಶ್ರೀ. ಯು. ಏನ್. ಕಾಲಕುಂದ್ರಿಕರ್, ಪ್ರಾಚಾರ್ಯ ಪ್ರೋ. ಡಿ. ಎ. ಕುಲಕರ್ಣಿ ಮತ್ತು ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಸಾಧಕರನ್ನು ಅಭಿನಂದಿಸಿದ್ದಾರೆ.////

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button