
ಪ್ರಗತಿವಾಹಿನಿ ಸುದ್ದಿ: ಸೋಷಿಯಲ್ ಮೀಡಿಯಾದಲ್ಲಿ ಪರಿಚಯವಾದ ಯುವತಿಯೊಂದಿಗೆ ಯುವಕ ಸ್ನೇಹ ಬೆಳೆಸಿದ್ದು, ಮದುವೆಯಾದ ಕೆಲವೇ ದಿನಗಳಲ್ಲಿ ಯುವತಿ ಹಣ, ಚಿನ್ನಾಭರಣಗಳನ್ನು ಪರರಯಾಗಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.
ಆಂಧ್ರಪ್ರದೇಶ ಮೂಲದ ಯುವಕನಿಗೆ ಉತ್ತರ ಪ್ರದೇಶ ಮೂಲದ ಯುವತಿ ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯವಾಗಿದ್ದು, ೧೦೦೦ ರೂಪಾಯಿ ಪಡೆದು ಬೆತ್ತಲಾಗಿ ಸ್ಕ್ರೀನ್ ಶಾಟ್ ತೆಗೆದುಕೊಂಡಿದ್ದ ಯುವತಿ ಬಳಿಕ ಬ್ಲ್ಯಾಕ್ ಮೇಲ್ ಮಾಡಿ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡಿದ್ದಾಳೆ. ಬಳಿಕ ಬಲವಂತದಿಂದ ಯುವಕನನ್ನು ಮದುವೆಯಾಗಿದ್ದಾಳಂತೆ.
ಹೀಗೆ ಮದುವೆಯಾದ ಕೆಲ ದಿನಗಳಲ್ಲೇ ಯುವತಿ ಮನೆಯಲ್ಲುದ್ದ ಹಣ, ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಾಳೆ ಎಂದು ಯುವಕ ಆರೋಪಿಸಿ, ದೂರು ದಾಖಲಿಸಿದ್ದಾನೆ.



