ಪ್ರಗತಿವಾಹಿನಿ ಸುದ್ದಿ: ಮನೆಯಂಗಳದಲ್ಲಿ ಬೆಳೆದಿದ್ದ ಹೂವಿನ ಗಿಡದಲ್ಲಿದ್ದ ಹೂವನ್ನು ತಿಂದ ಯುವತಿ ಇದ್ದಕ್ಕಿದ್ದಂತೆ ಸಾವನ್ನಪ್ಪಿರುವ ಘಟನೆ ಕೇರಳದಲ್ಲಿ ನಡೆದಿದೆ.
24 ವರ್ಷದ ಸೂರ್ಯ ಸುರೇಂದ್ರನ್ ಮೃತ ಯುವತಿ. ಫೋನ್ ನಲ್ಲಿ ಮಾತನಾಡುತ್ತ ಅಂಗಳದಲ್ಲಿ ಬೆಳೆದಿದ್ದ ಓಲಿಯಂಡರ್ ಫ್ಲವರ್ ಹೂವನ್ನು ತಿಂದಿದ್ದ ಸೂರ್ಯ ಸುರೇಂದ್ರನ್ ಕೆಲ ಹೊತಲ್ಲೇ ಸಾವನ್ನಪ್ಪಿದ್ದಾಳೆ.
ವೃತ್ತಿಯಲ್ಲಿ ನರ್ಸ್ ಆಗಿರುವ ಸೂರ್ಯ ಸುರೇಂದ್ರನ್, ತನ್ನ ಹೊಸ ಕೆಲಸಕ್ಕಾಗಿ ನೆಡುಂಬಸ್ಸೇರಿ ವಿಮಾನ ನಿಲ್ದಾಣದಿಂದ ಯುಕೆಗೆ ತೆರಳುತ್ತಿದ್ದಳು. ಈ ವೇಳೆ ಏಕಾಏಕಿ ವಿಮಾನ ನಿಲ್ದಾಣದಲ್ಲಿ ಕುಸಿದು ಬಿದ್ದಿದ್ದಾಳೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಹೃದಯಾಗಾತದಿಂದ ಸಾವನ್ನಪ್ಪಿದ್ದಾಳೆ ಎಂದು ಘೋಷಿಸಲಾಗಿದೆ.
ಆದರೆ ಅಲಪ್ಪುಳ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವರದಿಯಲ್ಲಿ ಯುವತಿಯ ರಕ್ತದಲ್ಲಿ ವಿಷಕಾರಿ ಅಂಶ ಕಂಡುಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇನ್ನು ಯುವತಿಯ ಸಾವಿಗೆ ಕಾರಣ ಪತ್ತೆಹಚ್ಚಲಾಗಿದೆ ಎಂದು ತನಿಖಾಧಿಕಾರಿ ಕೆ.ಅಭಿಲಾಷ್ ಕುಮಾರ್ ತಿಳಿಸಿದ್ದು, ಅರಳಿ ಹೂವು ಹಾಗೂ ಎಲೆ ತಿಂದಿದ್ದೇ ಯುವತಿಯ ಸಾವಿಗೆ ಕಾರಣ ಎಂದು ತಿಳಿದುಬಂದಿದೆ ಎಂದು ಹೇಳಿದ್ದಾರೆ. ಯುವತಿ ವಿಮಾನ ನಿಲ್ದಾಣಕ್ಕೆ ಹೋಗುವ ಮುನ್ನ ಫೋನ್ ನಲ್ಲಿ ಮಾತನಾಡುತ್ತ ಹೂವನ್ನು ಕಿತ್ತು ತಿಂದಿದ್ದಳು. ವಿಮಾನ ನಿಲ್ದಾಣಕ್ಕೆ ಹೋಗುವ ದಾರಿಯುದ್ದಕ್ಕೂ ಆಕೆ ನಿರಂತರವಾಗಿ ವಾಂತಿ ಮಾಡುತ್ತಿದ್ದಳು ಎಂದು ಆಕೆಯ ಕುಟುಂಬದವರು ತಿಳಿಸಿದ್ದಾರೆ ಎಂದು ಹೇಳಿದ್ದಾರೆ.
ಮನೆಯಂಗಳದಲ್ಲಿ ಬೆಳೆಯುವ ಓಲಿಯಾಂಡರ್ ಫ್ಲವರ್ ಇದನ್ನು ಮಲಯಾಳಂ ನಲ್ಲಿ ಅರಳಿ ಪೂ ಎಂದು ಕರೆಯುತ್ತಾರೆ. ಇದೇ ಹೂವುವನ್ನು ಫೋನಿನಲ್ಲಿ ಮಾತನಾಡುತ್ತ ಯುವತಿ ಸೇವಿಸಿದ್ದು, ಪ್ರಾಣವನ್ನೇ ಕಳೆದುಕೊಂಡಿದ್ದಾಳೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ