Belagavi NewsBelgaum NewsKannada NewsKarnataka News
*ಡೇಂಘಿ ಜ್ವರಕ್ಕೆ ಬೆಳಗಾವಿಯಲ್ಲಿ ಬಾಲಕಿ ಬಲಿ*
------WebKitFormBoundary3wBEJd3LS����
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ತಾಲೂಕಿನ ಹೊನಗಾ ಗ್ರಾಮದ 14 ವರ್ಷದ ಬಾಲಕಿ ಪ್ರಣಾಲಿ ಪರಶುರಾಮ ಹಿಂದರೆ ಶಂಕಿತ ಡೇಂಘಿ ಜ್ವರಕ್ಕೆ ಬಲಿಯಾಗಿದ್ದಾಳೆ.
ಬಾಲಕಿಗೆ ರವಿವಾರ ಕೇವಲ ಒಂದೆರಡು ಸಲ ವಾಂತಿ- ಬೇದಿ ಆಗಿ ಸೋಮವಾರ ಜ್ವರ ಕಾಣಿಸಿಕೊಂಡಿತ್ತು. ಪ್ರಣಾಲಿ ಕುಟುಂಬಸ್ಥರು ಮಂಗಳವಾರವೇ ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಿಸದೆ ಬಾಲಕಿ ಇಂದು ನಿಧನ ಹೊಂದಿದ್ದಾಳೆ. ಬಾಲಕಿ ಹೊನಗಾದ ಮರಾಠಾ ಮಂಡಳ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದಳು. ಬಾಲಕಿ ಸಾವಿನಿಂದ ಕುಟುಂಬಸ್ಥರು ಕಣ್ಣಿರಿಡುತ್ತಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ