ಪ್ರಗತಿವಾಹಿನಿ ಸುದ್ದಿ; ಮಂಡ್ಯ: ಬಾಲ ಮಂದಿರದಲ್ಲಿ ಬಾಲಕಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಖ್ಯಾತ ರೌಡಿ ಅಶೋಕ್ ಪೈ ನನ್ನು ಪೊಲೀಸರು ಬಂಧಿಸಿದ್ದಾರೆ.
ಆಗಸ್ಟ್ 31ರಂದು ಕಲ್ಲಹಳ್ಳಿ ಬಾಲ ಮಂದಿರದಲ್ಲಿ ಡೆತ್ ನೋಟ್ ಬರೆದಿಟ್ಟು ಬಾಲಕಿ ಆತ್ಮಹತ್ಯೆಗೆ ಶರಣಾಗಿದ್ದಳು. ಡೆತ್ ನೋಟ್ ನಲ್ಲಿ ರೌಡಿ ಅಶೋಕ್ ಪೈ ಸೇರಿದಂತೆ ಮೂವರ ಹೆಸರನ್ನು ನಮೂದಿಸಲಾಗಿತ್ತು. ಬಾಲಕಿ ಬರೆದ ಡೆತ್ ನೋಟ್ ಆಧಾರದ ಮೇಲೆ ಅಶೋಕ್ ಪೈ ನನ್ನು ಬಂಧಿಸಲಾಗಿದೆ.
ಕೆಲ ತಿಂಗಳ ಹಿಂದೆ ಬಾಲಕಿ ಪ್ರಿಯಕರನ ಹತ್ಯೆ ನಡೆದಿತ್ತು. ಈ ವೇಳೆ ಹಲ್ಲೆಗೊಳಗಾಗಿದ್ದರೂ ತಪ್ಪಿಸಿಕೊಂಡು ಜೀವ ಉಳಿಸಿಕೊಂಡಿದ್ದ ಬಾಲಕಿ ಬಾಲ ನ್ಯಾಯ ಮಂಡಳಿ ವಶದಲ್ಲಿದ್ದಳು. ಕೊಲೆ ಪ್ರಕರಣ ಸಂಬಂಧ ಬಾಲಕಿ ಅಪ್ಪ-ಅಮ್ಮನ ವಿರುದ್ಧ ಸಾಕ್ಷಿ ಹೇಳುವಂತೆ ಅಶೋಕ್ ಪೈ ಒತ್ತಡ ಹಾಕಿದ್ದಾಗಿ ಬರೆದುಕೊಂಡಿದ್ದಾಳೆ.
ಬಾಲ ಮಂದಿರದಲ್ಲಿ ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ನನ್ನ ಗೆಳೆಯ ಕೊಲೆಯಾಗಿದ್ದಾನೆ. ಅಪ್ಪ-ಅಮ್ಮ ಜೈಲು ಸೇರಿದ್ದಾರೆ. ಅಪ್ಪ-ಅಮ್ಮನ ವಿರುದ್ಧ ಸಾಕ್ಷಿ ಹೇಳುವಂತೆ ರೌಡಿ ಅಶೋಕ್ ಪೈ ಹಾಗೂ ಮೂವರು ಬಲವಂತ ಮಾಡುತ್ತಿದ್ದಾರೆ ಡೆತ್ ನೋಟ್ ನಲ್ಲಿ ಉಲ್ಲೇಖಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಇದೀಗ ಆರೋಪಿ ಅಶೋಕ್ ಪೈ ಸೇರಿದಂತೆ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಯುವತಿಗೆ ಚಾಕು ಇರಿತ; ಪಾಗಲ್ ಪ್ರೇಮಿ ಬಂಧನ
ಬ್ಯಾಗ್ ಖರೀದಿಯಲ್ಲಿ 6 ಕೋಟಿ ಕಿಕ್ ಬ್ಯಾಕ್; ರೋಹಿಣಿ ಸಿಂಧೂರಿ ವಿರುದ್ಧ ಗಂಭೀರ ಆರೋಪ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ