Latest

ಸಚಿವ ನಾರಾಯಣ ಗೌಡ ಉಡಾಫೆ ಹೇಳಿಕೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಲೆ ಏರಿಕೆ ವಿಚಾರವಾಗಿ ಉಡಾಫೆ ಉತ್ತರ ನೀಡಿರುವ ಸಚಿವ ನಾರಾಯಣಗೌಡ, ಶಾಸಕ, ಸಚಿವರಿಗೂ ಪೆಟ್ರೋಲ್ ಖರ್ಚು ಇರುತ್ತೆ. ನಮಗೆ ಯಾರೂ ವೇತನ ಹೆಚ್ಚಿಸಲ್ಲ, ಬೆಲೆ ಏರಿಕೆಯಿಂದ ಯಾರಿಗೂ ಸಮಸ್ಯೆಯಾಗಿಲ್ಲ ಎಂದು ಹೇಳಿದ್ದಾರೆ.

ಗ್ಯಾಸ್ ಸಿಲಿಂಡರ್, ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯವಸ್ತುಗಳ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಅವರು, ಬೆಲೆ ಏರಿಕೆಯಿಂದ ಯಾರಿಗೂ ಸಮಸ್ಯೆಯಾಗಿಲ್ಲ. ಇದೊಂದು ಡ್ರಾಮಾ. ರಾಜಕಾರಣದ ಪಿತೂರಿ. ಕಾಂಗ್ರೆಸ್ ಸರ್ಕಾರ ಇರುವಾಗ ಬೆಲೆ ಏರಿಕೆಆಗಿಲ್ವಾ? ಬೆಲೆಯಲ್ಲಿ ಏರಿಳಿತ ಸಹಜ ಎಂದರು.

Home add -Advt

ಹೆಣ್ಣುಮಕ್ಕಳಿಗೆ ತೊಂದರೆಯಾಗಬಾರದು ಎಂದು ಮನೆ ಮನೆಗೆ ಉಚಿತ ಸಿಲಿಂಡರ್ ಯೋಜನೆ ಜಾರಿಗೆ ತಂದಿದ್ದೇವೆ. ಇಂಧನ ಬೆಲೆ ಹೆಚ್ಚ್ಳ ಎಂದು ಪ್ರತಿಭಟನೆ ಮಾಡುವುದು ರಾಜಕೀಯವಷ್ಟೇ. ಪೆಟ್ರೋಲ್ ಡೀಸೆಲ್ ಖರ್ಚು ಶಾಸಕರು, ಸಚಿವರಿಗೂ ಇರುತ್ತೆ. ನಮಗೂ ವೇತನ ಹೆಚ್ಚಳವಾಗಿಲ್ಲ, ಹಾಗಂತ ನಾವು ಕೇಳಿಯೂ ಇಲ್ಲ ಬೆಲೆ ಏರಿಕೆ ತಾತ್ಕಾಲಿಕ, ಹೆಚ್ಚುಕಡಿಮೆ ಆಗುತ್ತಿರುತ್ತದೆ ಎಂದು ಹೇಳಿದ್ದಾರೆ.
ಬ್ಯಾಗ್ ಖರೀದಿಯಲ್ಲಿ 6 ಕೋಟಿ ಕಿಕ್ ಬ್ಯಾಕ್; ರೋಹಿಣಿ ಸಿಂಧೂರಿ ವಿರುದ್ಧ ಗಂಭೀರ ಆರೋಪ

Related Articles

Back to top button