GIT: ಇನ್ನು 15 ದಿನದಲ್ಲೇ ಎಂಜಿನಿರಿಂಗ್ ಶಿಕ್ಷಣದಲ್ಲಿ ಸಮಗ್ರ ಬದಲಾವಣೆ – VTU ಕುಲಪತಿ ಪ್ರೊ.ವಿದ್ಯಾಶಂಕರ ಘೋಷಣೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಎಂಜಿನಿಯರಿಂಗ್ ಶಿಕ್ಷಣದಲ್ಲಿ ಇನ್ನು 15 ದಿನದಲ್ಲೇ ಸಮಗ್ರ ಬದಲಾವಣೆ ತರಲಾಗುವುದು. ಇದೇ ವರ್ಷದಿಂದಲೇ ಮೊದಲ ವರ್ಷದ ಪಠ್ಯಕ್ರಮ ಸಂಪೂರ್ಣ ಬದಲಾಗಲಿದೆ ಎಂದು ವಿಶ್ವೇಶ್ವರಯ್ಯ ತಾಂತ್ರಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವಿದ್ಯಾಶಂಕರ ಘೋಷಿಸಿದ್ದಾರೆ.
ಶನಿವಾರ ಬೆಳಗ್ಗೆ ಕರ್ನಾಟಕ ಲಾ ಸೊಸೈಟಿಯ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ (ಜಿ.ಐ.ಟಿ) 6 ನೇಯ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಬದಲಾವಣೆಗೆ ತಕ್ಕಂತೆ ನಾವೂ ಬದಲಾಗಬೇಕು. ನಿಂತ ನೀರಾಗಬಾರದು, ಹರಿಯುವ ನೀರಾಗಬೇಕು. ಹಾಗಾಗಿ ವಿಶ್ವವಿದ್ಯಾಲಯದಲ್ಲಿ ಅನೇಕ ಬದಲಾವಣೆ ತರುವ ಕೆಲಸ ಮಾಡಲಾಗುವುದು. ಈಗಾಗಲೆ ಈ ಸಂಬಂಧ ಸಭೆಗಳನ್ನು ಆಯೋಜಿಸಲಾಗಿದೆ. ಎಂಜಿನಿಯರಿಂಗ್ ಶಿಕ್ಷಣದಲ್ಲಿ ಮಹತ್ತರ ಬದಲಾವಣೆ ತರುವ ಕೆಲಸವನ್ನು ಮಾಡಲಾಗುವುದು ಎಂದರು.
ಇದನ್ನೇ ಕಲಿಯಬೇಕೆನ್ನುವ ರಿಸ್ಟ್ರಿಕ್ಷನ್ ಇನ್ನು ಇರುವುದಿಲ್ಲ. ಕಲಿಯುವ ಅವಕಾಶವನ್ನು ವಿಸ್ತರಿಸಲಾಗುವುದು. ಸಮಗ್ರ ಬದಲಾವಣೆ ತರುವ ಮೂಲಕ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಯಲು ಅವಕಾಶ ಕಲ್ಪಿಸಲಾಗುವುದು. ಈ ವರ್ಷವೇ ಮೊದಲದ ವರ್ಷದ ಎಂಜಿನಿಯರಿಂಗ್ ನಲ್ಲೇ ಸಮಗ್ರ ಬದಲಾವಣೆಯಾಗಲಿದೆ. ಎಂಜಿನಿಂರಿಂಗ ಪದವೀದರರು ಅಟೆಂಡರ್ ಕೆಲಕ್ಕೆ ಸೇರುವ ಅನಿವಾರ್ಯತೆಯ ಇಂದಿನ ಸ್ಥಿತಿಯನ್ನು ಬದಲಾಯಿಸಲಾಗುವುದು ಎಂದು ವಿದ್ಯಾಶಂಕರ ತಿಳಿಸಿದರು.
ಇನ್ನು 3 ತಿಂಗಳಲ್ಲಿ ಎಂಜಿನಿಯರಿಂಗ್ ಶಿಕ್ಷಣವನ್ನು ಸಮಗ್ರ ಬದಲಾಯಿಸಲು ಉನ್ನತ ಶಿಕ್ಷಣ ಸಚಿವರು ಸಹ ಮುಂದಾಗಿದ್ದಾರೆ. ನಮಗೆ ಅವರ ಬೆಂಬಲವಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಆನ್ ಲೈನ್ ಶಿಕ್ಷಣವೇ ಪ್ರಧಾನವಾಗುತ್ತದೆ. ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಓದಿದ ವಿದ್ಯಾರ್ಥಿಗಳು ಪ್ರಪಂಚದ ಪ್ರಮುಖ ಸಂಸ್ಥೆಗಳ ಸಿಇಓಗಳಾಗಿದ್ದಾರೆ. ನಿಮ್ಮ ಗುರಿ ಉನ್ನತವಾಗಿರಬೇಕು. ನೀವು ಜೀವನದ 2ನೇ ಮಹತ್ವದ ಘಟ್ಟವನ್ನು ಪ್ರವೇಶಿಸುತ್ತಿದ್ದೀರಿ. ಹೊಸ ಸವಾಲನ್ನು, ಹೊಸ ಜನರನ್ನು ಎದುರಿಸಬೇಕಾಗಿದೆ. ಕಲಿಯುವದನ್ನು ನಿಲ್ಲಿಸಬೇಡಿ. ನಿರಂತರ ಕಲಿಯಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಮುಂದೆ ನಿಮಗೆ ನಾನು ಇನ್ನೂ ಜಾಸ್ತಿ ಓದಬೇಕಿತ್ತು ಎನಿಸುತ್ತದೆ. ಹಾಗಾಗಿ ಈಗಲೇ ಕಲಿಯುವುದನ್ನು ನಿಲ್ಲಿಸಬೇಡಿ ಎಂದರು.
ಈ ಕಾಲೇಜಿನಲ್ಲಿ ಓದಿರುವ ಶೇ.50ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಉದ್ಯೋಗ ನೀಡುವಲ್ಲಿ ನೆರವಾಗಿದ್ದಾರೆ. ಮಹಿಳೆಯರು ಸಬಲೀಕರಣಗೊಂಡಷ್ಟು ಭಾರತ ಸಬಲೀಕರಣಗೊಳ್ಳಲಿದೆ. ಇಲ್ಲಿ ಅತೀ ಹೆಚ್ಚು ಹೆಮ್ಣುಮಕ್ಕಳು ಎಂಜಿನಿಯರಿಂಗ್ ಪದವೀಧರರಾಗಿರುವುದು ಖುಷಿಯ ಸಂಗತಿ. ಸಮಾಜದಿಂದ ಪಡೆದಿದ್ದನ್ನು ಸಮಾಜಕ್ಕೆ ವಾಪಸ್ ನೀಡಿ. ತಂದೆ ತಾಯಿ, ಗುರುಗಳನ್ನು, ಸಂಸ್ಥೆಯನ್ನು ಮರೆಯಬೇಡಿ ಎಂದ ವಿದ್ಯಾಶಂಕರ, 15 ವರ್ಷದ ಹಿಂದೆ ಈ ಸಂಸ್ಥೆಗೆ ಭೇಟಿ ನೀಡಿದ್ದೆ. ಕಳೆದ 15 ವರ್ಷದಲ್ಲಿ ಜಿಐಟಿ 15 ಪಟ್ಟು ಹೆಚ್ಚು ಬೆಳೆದಿದೆ ಎಂದು ಪ್ರಶಂಸಿಸಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲದ ಕುಲಸಚಿವ ಡಾ.ಎ.ಎಸ್.ದೇಶಪಾಂಡೆ ಮಾತನಾಡಿ, ಎಷ್ಟೇ ದೊಡ್ಡವರಾದರೂ ನಿಮ್ಮ ಪಾಲಕರು, ಶಿಕ್ಷಕರು ಮತ್ತು ಕಲಿತ ಸಂಸ್ಥೆಯನ್ನು ಮರೆಯಬೇಡಿ ಎಂದರು.
ನಾವು ಹೇಗೆ ಕಲಿಯಬೇಕೆನ್ಮುವುದನ್ನೇ ಕಲಿಯುವುದಿಲ್ಲ. ಹಾಗಾಗಿ ಕಲಿಕೆ ನಿರಂತರವಾಗಿರಲಿ ಎಂದ ಅವರು, ಜಿಐಟಿ ರಾಷ್ಟ್ರದಲ್ಲೇ ಒಂದು ಉತ್ತಮ ಶಿಕ್ಷಣ ಸಂಸ್ಥೆ ಎಂದರು.
. ಜಿ.ಐ.ಟಿ ಮಾಜಿ ವಿದ್ಯಾರ್ಥಿಯಾದ ಅಶೋಕ ಐರನ್ ಗ್ರೂಪ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಜಯಂತ್ ಹುಂಬರವಾಡಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಜೀವನ ನೀವು ಅಂದುಕೊಂಡಷ್ಟು ಸರಳವಿಲ್ಲ. ಜೀವನದಲ್ಲಿ ಪಾಠಕಲಿಯುತ್ತಲೇ, ಸವಾಲು ಎದುರಿಸುತ್ತಲೆ ಬೆಳೆಯಬೇಕು ಎಂದು ಅವರು ಹೇಳಿದರು.
ಆಂಧ್ರಪ್ರದೇಶದ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ಎ.ಕೋರಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಪದವಿ ಪ್ರದಾನ ಭಾಷಣ ಮಾಡಿದರು. ಕರ್ನಾಟಕ ಲಾ ಸೊಸೈಟಿಯ ಅಧ್ಯಕ್ಷ ಅನಂತ ಮಂಡಗಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷ ಆರ್ ಬಿ ಭಂಡಾರೆ ಹಾಗೂ ಡಿ ವಿ ಕುಲಕರ್ಣಿ , ಕಾರ್ಯಾಧ್ಯಕ್ಷ, ಕರ್ನಾಟಕ ಲಾ ಸೊಸೈಟಿ ಪ್ರದೀಪ ಸಾವಕಾರ, ಕಾರ್ಯದರ್ಶಿ ವಿ.ಜಿ.ಕುಲಕರ್ಣಿ ಮತ್ತು ಎಸ್.ವಿ.ಗಣಾಚಾರಿ, ಮತ್ತು ಜಿಐಟಿ ಆಡಳಿತ ಮಂಡಳಿ ,ಕಾರ್ಯಾಧ್ಯಕ್ಷರು, ರಾಜೇಂದ್ರ ಬೆಳಗಾಂವಕರ, ಆಡಳಿತ ಮಂಡಳಿ (ಎಂಎಎಂ), ಕಾರ್ಯಾಧ್ಯಕ್ಷರು, ಪ್ರಮೋದ ಕಠಾವಿ, ಮತ್ತು ಎಲ್ಲಾ ಅಕಾಡೆಮಿಕ್ ಕೌನ್ಸಿಲ್ ಮತ್ತು ಆಡಳಿತ ಮಂಡಳಿಯ ಸದಸ್ಯರು ಭಾಗವಹಿಸಿದ್ದರು.
ಈ ವರ್ಷ ಕೆಎಲ್ಎಸ್ ಜಿಐಟಿಯು 779 ಬಿಇ , 66 ಬಿ.ಆರ್ಕ್ ಪದವೀಧರರು ಸೇರಿದಂತೆ 845 ಪದವಿ ವಿದ್ಯಾರ್ಥಿಗಳಿಗೆ ತಾತ್ಕಾಲಿಕ ಪದವಿಗಳನ್ನು ನೀಡಲಿದೆ. ಮತ್ತು ಯುಜಿ ವಿಭಾಗದಲ್ಲಿ ಗಿರೀಶ್ ಎಂ. ಪ್ರಭುಖಾನೋಳ್ಕರ್, ಮೆಕ್ಯಾನಿಕಲ್ ಇಂಜಿನಿಯರಿಂಗ್ ಅತ್ಯಧಿಕ ಸಿಜಿಪಿಎ 9.97 ಪಡೆದಿದ್ದಾರೆ. ಮತ್ತು ಪಿಜಿಯಲ್ಲಿ ಎಂ.ಟೆಕ್ ನ ಶ್ವೇತಾ ಉಗಾರೆ. ಡಿಜಿಟಲ್ ಕಮ್ಯುನಿಕೇಷನ್ ಅಂಡ್ ನೆಟವರ್ಕಿಂಗ್ನಲ್ಲಿ ಅತ್ಯಧಿಕ ಸಿಜಿಪಿಎ 9.97 ಪಡೆದು ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ.
53 ಎಂ.ಟೆಕ್., 108 ಎಂಬಿಎ ಮತ್ತು 118 ಎಂಸಿಎ ವಿದ್ಯಾರ್ಥಿಗಳನ್ನು ಒಳಗೊಂಡು 279 ಸ್ನಾತಕೋತ್ತರ ವಿದ್ಯಾರ್ಥಿಗಳು ಸೇರಿದಂತೆ , ಒಟ್ಟು 1124 ಪದವೀಧರರಿಗೆ ತಾತ್ಕಾಲಿಕ ಪದವಿಗಳನ್ನು ನೀಡಿ ಗೌರವಿಸಲಿದೆ ಎಂದು ಪ್ರಾಂಶುಪಾಲರಾದ ಡಾ. ಜಯಂತ ಕಿತ್ತೂರ ಪ್ರಾಸ್ತಾವಿಕ ಮಾತಿನಲ್ಲಿ ತಿಳಿಸಿದರು.
ಜಿಐಟಿಯಲ್ಲಿ ಶನಿವಾರ 6ನೇ ಪದವಿ ಪ್ರದಾನ ಸಮಾರಂಭ
https://pragati.taskdun.com/latest/6th-graduation-ceremony-at-git-on-saturday/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ