Latest

*ಸ್ಟಾರ್ಟ್‌ಅಪ್ ಇಂಡಿಯಾ ಕಾರ್ಯಕ್ರಮದಲ್ಲಿ ಜಿಅಯ್ ಟಿ ವಿದ್ಯಾರ್ಥಿಗಳ ಯಶಸ್ಸು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಜನವರಿ 16 ರಂದು ರಾಷ್ಟ್ರೀಯ ಸ್ಟಾರ್ಟ್ ಅಪ್ ದಿನದ ಸಂದರ್ಭದಲ್ಲಿ, ಬೆಂಗಳೂರಿನಲ್ಲಿರುವ ಕೋಕ್ರಿಯೇಟ್, ಕೃಷಿಕಲ್ಪ್ ಮತ್ತು ಡಿಪಿಐಐಟಿ ಸಹಯೋಗದೊಂದಿಗೆ ಸ್ಟಾರ್ಟ್‌ಅಪ್ ಇಂಡಿಯಾ ವಿದ್ಯಾರ್ಥಿಗಳಿಗೆ ತಮ್ಮ ಯೋಚನೆಗಳನ್ನು ಹೂಡಿಕೆದಾರರು ಮತ್ತು ಉದ್ಯಮಿಗಳಿಗೆ ತಿಳಿಸಲು ಅವಕಾಶವನ್ನು ನೀಡಿತು.

ಇದರಲ್ಲಿ ಟಾರ್ಗೆಟ್, ಜೆರೋಧಾ, ಜೆ. ಪಿ. ಮೋರ್ಗನ್ ಮತ್ತು ಎಚ್. ಸಿ. ಎಲ್. ಅಂತಹ ಕಂಪನಿಗಳನ್ನು ಸೇರಿಸಲಾಯಿತು. ಒಟ್ಟು 160 ತಂಡಗಳ ಪೈಕಿ ಕೆ. ಎಲ್. ಎಸ್. – ಜಿ. ಅಯ್. ಟಿ. ತಂಡದಲ್ಲಿ ಆದಿತ್ಯ ರೇವಣಕರ್, ಶ್ರಾವಣಿ ಗಡ್ಕರಿ, ನಿಹಾಲ್ ಕರ್ಚಿ ಮತ್ತು ಹರ್ಷ ಖೋತ್ ಇವರಿಗೆ ಕಂಪ್ಯೂಟರ್ ವಿಭಾಗದ ಡಾ. ಕುಲದೀಪ್ ಸಾಂಬ್ರೇಕರ್ ಮಾರ್ಗದರ್ಶನ ನೀಡಿದರು. ಮೂಲ ಮಾದರಿಯ ನಿಧಿಗಾಗಿ ತಂಡವು ಅಗ್ರ 15 ರಲ್ಲಿ ಸ್ಥಾನ ಗಳಿಸಿತು. ಎಡ್ಜ್ ಆಪ್ಟಿಮೈಸ್ಡ್ ಹೈಬ್ರಿಡ್ ಇಂಟೆಲಿಜೆನ್ಸ್‌ನಲ್ಲಿನ ಅವರ ಯೋಜನೆಯು ಮೆಚ್ಚುಗೆ ಪಡೆಯಿತು ಮತ್ತು ಒಂದು ಮೂಲ ಮಾದರಿಯು ರೂ. 50,000 ಧನಸಹಾಯ ಪಡೆದರು.
ಬೆಂಗಳೂರಿನ ಪಿ. ಇ. ಎಸ್. ವಿಶ್ವವಿದ್ಯಾನಿಲಯವು ಉದ್ಯಮಶೀಲತೆ ಮತ್ತು ಆವಿಷ್ಕಾರವನ್ನು ಆಚರಿಸಲು ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಅಜಯ್ ಚೌಧರಿ, ಪ್ರಶಾಂತ್ ಪ್ರಕಾಶ್ ಮತ್ತು ಕೆಂಡ್ರಿಲ್, ಎ.ಏನ್. ಎಸ್. ಆರ್. ಮತ್ತು ಸಂಗೀತಾ ಮೊಬೈಲ್ಸ್‌ನಂತಹ ಕಂಪನಿಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಜಿ. ಅಯ್. ಟಿ. ಆಡಳಿತ ಮಂಡಳಿ ಅಧ್ಯಕ್ಷ ರಾಜೇಂದ್ರ ಬೆಳಗಾಂವಕರ ಅವರು ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿ ಸ್ವಂತ ಉದ್ಯಮ ಆರಂಭಿಸಲು ಪ್ರೋತ್ಸಾಹಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button