ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಭಾರತದ ಪ್ರತಿಷ್ಠಿತ ಸಾಂಸ್ಕೃತಿಕ ಮೇಳ ಎಂದು ಪ್ರಸಿದ್ದಿ ಪಡೆದ ಗೋವಾ ದ ಬಿರ್ಲಾ ತಾಂತ್ರಿಕ ಮಹಾವಿದ್ಯಾಲಯ ಇತ್ತೀಚಿಗೆ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ ಅಂತರ ಮಹಾವಿದ್ಯಾಲಯ (ಬಿಟ್ಸ್ -ಗೋವಾ) ದ ಸಾಂಸ್ಕೃತಿಕ ಮೇಳ “ವೇವ್ಸ್ – ೧೯” ರಲ್ಲಿ ಬೆಳಗಾವಿಯ ಜಿಐಟಿ ವಿದ್ಯಾರ್ಥಿಗಳು ಸಮಗ್ರ ವೀರಾಗ್ರಣಿ ಪ್ರಶಸ್ತಿ (ಚಾಂಪಿಯನ್ ಪ್ರಶಸ್ತಿ) ಪಡೆದುಕೊಂಡಿದ್ದಾರೆ.
ದೇಶದ ಸುಮಾರು ೫೦ ಸಂಸ್ಥೆಗಳಿಂದ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದ ಈ ಮೇಳದಲ್ಲಿ ಜಿಐಟಿ ವಿದ್ಯಾರ್ಥಿಗಳು ನಾಟ್ಯಾಂಜಲಿ (ಥೀಮ್ಯಾಟಿಕ್ ಗ್ರೂಪ್ ಡ್ಯಾನ್ಸ್), ಫ್ಯಾಶನ್ ಪೆರೇಡ್ (ಫ್ಯಾಷನ್), ರಂಗಮಂಚ್ (ನಾಟಕ), ಅವಂತ್-ಗಾರ್ಡ್ (ಫ್ಯಾಷನ್ ಡಿಸೈನಿಂಗ್), ಕಲ್ಚರಲ್ ಗೌಂಟ್ಲೆಟ್ (ಸಾಹಿತ್ಯ), ಮೊಟೀಫ್ (ಟಿ-ಶರ್ಟ್ ಪೇಂಟಿಂಗ್), ಆರ್ಟ್ ಥಾನ್ (ಫೈನ್ ಆರ್ಟ್ಸ್) ಮತ್ತು ಕಸದಿಂದ ರಸ ಈ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಹಾಗೂ ನುಕ್ಕಡ್ ನಾಟಕ (ಬೀದಿ ನಾಟಕ) ದಲ್ಲಿ 2 ನೇ ಸ್ಥಾನ, ಇಂಡಿಯನ್ ರಾಕ್ (ಸಂಗೀತ), ಸೈಲೆನ್ಸ್ ಈಸ್ ಆಂಪ್ಸ್ (ಸಂಗೀತ), ಮೊಟೀಫ್ (ಟಿ- ಶರ್ಟ್ ಪೇಂಟಿಂಗ್) ಹಾಗೂ ಇನ್ನೂ ಅನೇಕ ವೈಯಕ್ತಿಕ ವಿಭಾಗದಲ್ಲಿ ಬಹುಮಾನಗಳನ್ನು ಗೆದ್ದು ರಾಷ್ಟ್ರೀಯ ಚಾಂಪಿಯನ್ ಅನಿಸಿಕೊಂಡಿದ್ದಾರೆ.
ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ. ಡಿ. ಎ. ಕುಲಕರ್ಣಿ, ಸಾಂಸ್ಕೃತಿಕ ಚಟುವಟಿಕೆಗಳ ಸಂಯೋಜಕ ಪ್ರೊ. ಶಿವಕುಮಾರ, ಪ್ರೊ. ಅಭಿಷೇಕ್ ದೇಶಮುಖ, ಪ್ರೊ. ಪ್ರಿಯಾಂಕಾ ದೇಶಮುಖ, ಪ್ರೊ. ತೇಜರಾಜ್ ಕಿಂಕರ್ ಹಾಗೂ ಪ್ರೊ. ಕುಲದೀಪ್ ಸಾಂಬ್ರೆಕರ್ ಅವರ ಮಾರ್ಗದರ್ಶನದಲ್ಲಿ ಸುಮಾರು ೮೦ ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಈ ಮೇಳದಲ್ಲಿ ಭಾಗವಹಿಸಿದ್ದರು.
ಈ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಕೆಎಲ್ಎಸ್ ಕಾರ್ಯಾಧ್ಯಕ್ಷ ಪಿ. ಎಸ್.ಸಾವಕಾರ, ಜಿಐಟಿ ಆಡಳಿತ ಮಂಡಳಿ ಅಧ್ಯಕ್ಷ ಎಂ. ಆರ್ . ಕುಲಕರ್ಣಿ ಮತ್ತು ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ