
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: “ಉತ್ತಮ ಸಂಸ್ಕಾರ, ಗುರು-ಹಿರಿಯರ ಮೇಲೆ ಗೌರವವನ್ನು ಕಲಿಸಿ ಕೊಟ್ಟಾಗ ಮಾತ್ರ ಮಕ್ಕಳನ್ನು ದೇಶದ ಉತ್ತಮ ಪ್ರಜೆಗಳನ್ನಾಗಿ ರೂಪಿಸಬಹುದು” ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಅವರು ಕುಕಡೊಳ್ಳಿ ಗ್ರಾಮದ ಸರಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದರು.
“ಮಕ್ಕಳು ದೇವರ ಸಮಾನರಾಗಿದ್ದು, ಶಿಕ್ಷಕರು ಅವರನ್ನು ನಯ ವಿನಯದಿಂದ ಕಾಣುವ ಮೂಲಕ ಅವರ ಉಜ್ವಲ ಭವಿಷ್ಯಕ್ಕಾಗಿ ಶೃಮಿಸಿ, ಸಮರ್ಪಕ ರೀತಿಯಲ್ಲಿ ಪಠ್ಯವನ್ನು ಬೋಧಿಸಬೇಕು. ಪುಸ್ತಕಗಳನ್ನು ಓದುವ ಹವ್ಯಾಸ ಜತೆಗೆ ಯೋಗ ಮತ್ತು ಪ್ರಾಣಾಯಾಮಗಳನ್ನು ಸಹ ಹೇಳಿ ಕೊಡಬೇಕು. ಪೋಷಕರಾದವರು ಮಕ್ಕಳಿಗೆ ಜಂಕ್ ಫುಡ್ ನಿಂದ ದೂರವಿಡಬೇಕು” ಎಂದು ಲಕ್ಷ್ಮೀ ಹೆಬ್ಬಾಳಕರ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ಫಕೀರಪ್ಪ ಕುರುಬರ, ಮಲ್ಲಪ್ಪ ಗಿರಿಯಾಲ, ಮೇದಾರ, ಪದ್ಮಾವತಿ ದೇಸೂರಕರ್, ಶಿವಪ್ಪ ಕುಂಬಾರ, ಯು.ಡಿ.ಪಾಶ್ಚಾಪುರ ಹಾಗೂ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.
*ಕಾಂಗ್ರೆಸ್ ನಿಂದ ಮತ್ತೊಂದು ಮಹತ್ವದ ಘೋಷಣೆ*
https://pragati.taskdun.com/d-k-shivakumarcongress10kg-free-raice-pressmeetsiddaramaiah/
ಬೆಳಗಾವಿ ಗ್ರಾಮೀಣ ಕ್ಷೇತ್ರದ ಅಭಿವೃದ್ಧಿ ತೃಪ್ತಿ ತಂದಿದೆ: ಲಕ್ಷ್ಮೀ ಹೆಬ್ಬಾಳಕರ
https://pragati.taskdun.com/development-of-belagavi-rural-sector-is-satisfactory-lakshmi-hebbalakar/
ಮೈಸೂರಿನ ಬುಡಕಟ್ಟು ಜನಾಂಗಕ್ಕೆ ಬೆಳಗಾವಿ ಜನತೆ ಮಾನವೀಯ ಸ್ಪಂದನೆ
https://pragati.taskdun.com/humanitarian-response-to-the-tribes-of-mysore-by-people-of-belagavi/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ