Belagavi NewsBelgaum NewsKannada NewsKarnataka News

*ಸಮಯಕ್ಕೆ ಮಹತ್ವ ನೀಡಿ : ಜಿಪಂ ಸಿಇಒ ರಾಹುಲ್ ಶಿಂಧೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪ್ರತಿ ದಿನವು ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಚೇರಿ ಸಮಯಕ್ಕೆ ಸರಿಯಾಗಿ ಹಾಜರಿರಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ಶಿಂಧೆ ಅವರು ಸೂಚಿಸಿದರು.

ಸ್ಥಳೀಯ ಕಚೇರಿಗೆ ಸೋಮವಾರ ಜುಲೈ 15 ರಂದು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಗೆ ಭೇಟಿ ನೀಡಿ ಕಚೇರಿಯ ವಿವಿಧ ಕಾಮಗಾರಿಗಳ ಕಡತಗಳನ್ನು ಪರಶೀಲಿಸಿ ಮಾತನಾಡಿದ ಅವರು ಎಲ್ಲ ಕಾಮಗಾರಿ ಕಡತಗಳನ್ನು ಕಾಲಮಿತಿಯೊಳಗೆ ಅಚ್ಚು ಕಟ್ಟಾಗಿ ನಿರ್ವಹಣೆ ಮಾಡಬೇಕು. ಯಾವುದೇ ಕಾರಣಕ್ಕೂ ಕಡತಗಳ ನಿರ್ವಹಣೆ ಬಾಕಿ ಇರುವಂತಿಲ್ಲ ಕಡತಗಳು ಬಾಕಿ ಇದ್ದರೆ ಅಂತಹ ಅಧಿಕಾರಿ ಮತ್ತು ಸಿಬ್ಬಂದಿಗಳ ಮೇಲೆ ಕ್ರಮ ಜರಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕಚೇರಿ ಕಟ್ಟಡವನ್ನು ಪರಿಶೀಲಿಸಿ, ಕಾಲ ಮಿತಿಯೊಳಗೆ ಕಚೇರಿಗೆ ಬರುವುದರ ಜೊತೆಗೆ ಕಚೇರಿಯ ಆವರಣ ಸ್ವಚ್ಚತೆ ಕಾಪಾಡಿಕೊಳ್ಳಬೇಕು ತಿಳಿಸಿದರು. ಪಕ್ಕದಲ್ಲಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಭೇಟಿ ನೀಡಿ ಸಿಬ್ಬಂದಿಗಳ ಹಾಜರಾತಿಯನ್ನು ಪರಿಶೀಲನೆ ಮಾಡಿದರು. ನೀರು ಪರೀಕ್ಷಾ ಪ್ರಯೋಗಾಲಯಕ್ಕೆ ಭೇಟಿ ನೀಡಿ ಪ್ರಯೋಗಾಲಯದ ಸಿಬ್ಬಂದಿ ಜೊತೆ ಚರ್ಚೆ ಮಾಡಿ, ನಂತರ ಎಫ್ ಟಿ ಕೆ ಉಪಯೋಗಿಸಿ ನೀರಿನ ಗುಣಮಟ್ಟ ಪರೀಕ್ಷೆ ಬಗ್ಗೆ ಚರ್ಚೆ ಮಾಡಿದರು.

ಈ ವೇಳೆ ಕಾರ್ಯನಿರ್ವಾಹಕ ಅಭಿಯಂತರರು ಪಂಚಾಯತ ರಾಜ್ ಇಲಾಖೆಯ ಉಪ ವಿಭಾಗದ ಇಇ ಆನಂದ ಎಸ್. ಬನಗಾರ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಇ ಶಶಿಕಾಂತ ನಾಯಕ, ಎಇ ಸೋಮಶೇಖರ ಅವ್ವಣ್ಣಿ, ಸೇರಿದಂತೆ ಇತರ ಇಬ್ಬಂದಿಗಳು ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button