
ಅಂಗಡಿ ತಾಂತ್ರಿಕ ಹಾಗೂ ವ್ಯವಸ್ಥಾಪನಾ ಮಹಾವಿದ್ಯಾಲಯ ಬೆಳಗಾವಿ
ಪ್ರಗತಿವಾಹಿನಿ ಸುದ್ದಿ: ಅಂಗಡಿ ಕಾಲೇಜಿನ ತರಬೇತಿ ಮತ್ತು ನಿಯೋಜನೆ ವಿಭಾಗ ಹಾಗೂ VIVARTA (ವಿವಾರ್ತಾ) ಸಹಯೋಗದೊಂದಿಗೆ, ಡಿಸೆಂಬರ್ 4 ರಂದು ಸ್ಟಡಿ ಅಬ್ರಾಡ್ ಎಕ್ಸ್ಪೊವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ದಕ್ಷಿಣ ಮತ್ತು ಮಹಾರಾಷ್ಟ್ರದ ವಲಯ ವ್ಯವಸ್ಥಾಪಕ ಸಿದ್ಧಾರ್ಥ ಜೋಷಿ ಸೇಷನ್ ನಡೆಸಿದರು. ಈ ಕಾರ್ಯಕ್ರಮದಲ್ಲಿ, ಅಪ್‌ಗ್ರೇಡ್ ಆಫ್‌ಲೈನಿನ ಪಾಲುದಾರ ಸೂರಜ್ ಬಾಲೋಜಿ, ವಿವಾರ್ತಾ ಸಂಸ್ಥೆಯ ಪಾಲುದಾರ ಮಂಗಲ ಬಾಲೋಜಿ ಮತ್ತು ಸಲಹೆಗಾರ ಆಸಿಫ್ ಶೇಖ್ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಗಳು ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಹೇಗೆ ಪ್ರವೇಶ ಪಡೆಯಬೇಕು ಎಂಬುದರ ಕುರಿತು ಮಾರ್ಗದರ್ಶನ ನೀಡಿದರು ಮತ್ತು ಯುರೋಪ್, ಅಮೇರಿಕ, ಜರ್ಮನಿ, ಕೆನಡಾ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಾದ್ಯಂತ ಉನ್ನತ ಶಿಕ್ಷಣ ಪಡೆಯುವ ಪ್ರಯೋಜನಗಳ ಕುರಿತು ತಿಳಿಸಿದರು.
ವೈಯಕ್ತೀಕರಿಸಿದ ಸಮಾಲೋಚನೆ, ವಿಶ್ವವಿದ್ಯಾಲಯ ಶಾರ್ಟಲಿಸ್ಟಿಂಗ್, ಅರ್ಜಿ ಮತ್ತು ದಾಖಲಾತಿ ಬೆಂಬಲ, ಪರೀಕ್ಷೆ ತಯಾರಿ, ಹಣಕಾಸು ಯೋಜನೆ, ಶಿಕ್ಷಣ ಸಾಲ ಮಾರ್ಗದರ್ಶನ ಮತ್ತು ಸಮಗ್ರ ವೀಸಾ ನೆರವು ಸೇರಿದಂತೆ ವಿದೇಶದಲ್ಲಿ ಅಪ್‌ಗ್ರೇಡ್ ಸ್ಟಡಿ ಒದಗಿಸುವ ವ್ಯಾಪಕ ಶ್ರೇಣಿಯ ಸೇವೆಗಳನ್ನು ವಿವರಿಸಿದರು.
300 ಕ್ಕೂ ಅಧಿಕ ಜಾಗತಿಕ ವಿಶ್ವವಿದ್ಯಾಲಯಗಳಲ್ಲಿ ಪಾಲುದಾರಿಕೆ ಮತ್ತು ಹೆಚ್ಚಿನ ಬೇಡಿಕೆಯ ಕ್ಷೇತ್ರಗಳಾದ ಡೇಟಾ ಸಾಯಿನ್ಸ, ಏಐ/ಎಂ.ಎಲ್, ಇಂಜನೀಯರಿಂಗ್, ಎಂ.ಬಿ.ಎ., ಹಣಕಾಸು ಮತ್ತು ಹೆಚ್ಚಿನ ಕಾರ್ಯಕ್ರಮಗಳೊಂದಿಗೆ ಜಾಗತಿಕ ಅವಕಾಶಗಳನ್ನು ಆತ್ಮವಿಶ್ವಾಸದಿಂದ ಅನ್ವೇಷಿಸಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಯಿತು.
ಈ ಕಾರ್ಯಕ್ರಮವನ್ನು ಪ್ರೊ.ವಿಶಾಲಕಿರ್ತಿ ಪಾಟೀಲ್(ತರಬೇತಿ ಮತ್ತು ನಿಯೋಜನೆ ಅಧಿಕಾರಿ), ಅಂಗಡಿ ಶಿಕ್ಷಣ ಸಂಸ್ಥೆಯ ನಿರ್ವಹಣೆ, ಸಂಸ್ಥೆಯ ನಿರ್ದೇಶಕಿ ಡಾ. ಸ್ಪೂರ್ತಿ ಅಂಗಡಿ ಪಾಟೀಲ, ಆಡಳಿತಾಧಿಕಾರಿ ರಾಜು ಜೋಶಿ ಮತ್ತು ಪ್ರಾಚಾರ್ಯ ಡಾ. ಆನಂದ ಬಿ. ದೇಶಪಾಂಡೆ ಸೇರಿದಂತೆ ಕಾಲೇಜಿನ ಸಿಬ್ಬಂದಿ ಮತ್ತು ವಿವಿಧ ವಿಭಾಗಗಳ ವಿದ್ಯಾರ್ಥಿ ಸಂಯೋಜಕರು ಎಲ್ಲರೊಡಗೂಡಿ ಕಾರ್ಯಕ್ರಮವನ್ನು ಸಂಯೋಜಿಸಲಾಗಿತ್ತು.




