Latest

ಗೋವಾ ವಿಧಾನಸಭಾ ಚುನಾವಣೆ; ಪ್ರಚಾರ ಸಭೆಯಲ್ಲಿ ಮಹಿಳಾ ಸಬಲೀಕರಣ ಕುರಿತು ಮಾತನಾಡಿ ಗಮನ ಸೆಳೆದ ಡಾ.ಸೋನಾಲಿ ಸರ್ನೋಬತ್

ಪ್ರಗತಿವಾಹಿನಿ ಸುದ್ದಿ; ಪಣಜಿ: ಗೋವಾ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ಪಾಲ್ಗೊಂಡಿರುವ ಬೆಳಗಾವಿ ಬಿಜೆಪಿ ಗ್ರಾಮೀಣ ಮಹಿಳಾ ಮೋರ್ಚಾದ ಉಪಾಧ್ಯಕ್ಷೆ ಡಾ. ಸೋನಾಲಿ ಸರ್ನೋಬತ್ ಅವರು ಮಹಿಳಾ ಸಬಲೀಕರಣದ ಕುರಿತು ವಿಸ್ತ್ರತವಾಗಿ ಮಾತನಾಡಿ ಗಮನ ಸೆಳೆದಿದ್ದಾರೆ.

ಗೋವಾದಲ್ಲಿ ವಿಧಾನಸಭೆ ಚುನಾವಣೆ ಕಾವೇರುತ್ತಿದೆ. ಬಿಜೆಪಿ ವತಿಯಿಂದ ಪ್ರಚಾರ ಜೋರಾಗಿ ನಡೆದಿದೆ. ಬೆಳಗಾವಿಯ ಅನೇಕ ಬಿಜೆಪಿ ಪ್ರಮುಖರು ಗೋವಾದಲ್ಲಿ ಪ್ರಚಾರದಲ್ಲಿ ಪಾಲ್ಗೊಂಡಿದ್ದಾರೆ.

ಚುನಾವಣೆಯ ಪೂರ್ವಸಿದ್ಧತೆ ನಿಮಿತ್ತ ಪಣಜಿಯ ಸರಸ್ವತಿ ಮಂದಿರದ ಬಿಜೆಪಿ ಕಚೇರಿಯಲ್ಲಿ ನಡೆದ ಪಣಜಿ ಮಹಿಳಾ ಮೋರ್ಚಾ ಸಭೆಯಲ್ಲಿ ಮಾತನಾಡಿದ ಡಾ. ಸೋನಾಲಿ ಸರ್ನೋಬತ್ ಅವರು, ಮಹಿಳಾ ಸಬಲೀಕರಣಕ್ಕೆ ಪ್ರಧಾನಿ ನರೇಂದ್ರ ಮೋದಿ ನೇೃತ್ವದ ಕೇಂದ್ರ ಸರಕಾರ ನೀಡಿದ ಅನೇಕ ಕೊಡುಗೆಗಳ ಬಗ್ಗೆ ವಿವರಿಸಿದರು.

ಕೇಂದ್ರ ಸರಕಾರ ಮಹಿಳಾ ಸಬಲೀಕರಣದ ಸಲುವಾಗಿ ಅನೇಕ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ, ಭೇಟಿ ಬಚಾವೊ ಭೇಟಿ ಪಡಾವೋದಂತಹ ಶೈಕ್ಷಣಿಕ ಯೋಜನೆಯಿಂದ ಲಕ್ಷಾಂತರ ಹೆಣ್ಣುಮಕ್ಕಳು ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿದೆ. ನಿರ್ಭಯಾ ಯೋಜನೆಯ ಅನುದಾನದ ಮೂಲಕ ಪ್ರಾರಂಭಿಸಲಾಗಿರುವ ಒನ್ ಸ್ಟಾಪ್ ಸೆಂಟರ್ ಯೋಜನೆಯಿಂದ ಮಹಿಳೆಯರಿಗೆ ಭದ್ರತೆ ಸಿಗುತ್ತಿದೆ. ಮಹಿಳೆಯರಿಗೆ ಕೌಶಲ್ಯ ತರಬೇತಿ ಮತ್ತು ಉದ್ಯೋಗ ಒದಗಿಸುವ ಸ್ಟೆಪ್ ಯೋಜನೆ, ಉದ್ಯೋಗಸ್ಥ ಮಹಿಳೆಯರಿಗೆ ಹಾಸ್ಟೇಲ್ ಸೌಕರ್ಯಗಳು ಸೇರಿದಂತೆ ಸರಕಾರ ಜಾರಿಗೆ ತಂದಿರುವ ನಾನಾ ಯೋಜನೆಗಳ ಕುರಿತು ವಿವರಿಸಿದರು.

Home add -Advt

ಈ ಎಲ್ಲ ಯೋಜನೆಗಳನ್ನು, ಬಿಜೆಪಿ ಸಾಧನೆ, ಇತಿಹಾಸಗಳನ್ನು ಮುಂದಿಟ್ಟು ಚುನಾವಣೆ ಪ್ರಚಾರದಲ್ಲಿ ಪಾಲ್ಗೊಳ್ಳುವಂತೆ ಅವರು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಪ್ರೇಮಾ ಭಂಡಾರಿ, ಪಣಜಿ ಮಹಿಳಾ ಮೋರ್ಚಾದ ಉತ್ಕರ್ಶಾ, ಕಾರ್ಯದರ್ಶಿ ಸೀಮಾ ಮೊದಲಾದವರು ಉಪಸ್ಥಿತರಿದ್ದರು.

ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಆರೋಗ್ಯಸ್ಥಿತಿ ಇನ್ನಷ್ಟು ಗಂಭೀರ

Related Articles

Back to top button