Karnataka NewsLatest

ಗೂಡ್ಸ್ ವಾಹನದಲ್ಲಿ ಗೋವಾದ ಮದ್ಯ ಸಾಗಾಟ

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಗೋವಾ ರಾಜ್ಯದಲ್ಲಿ ಮಾರಾಟಕ್ಕೆ ತಯಾರಿಸಿದ್ದ ಮದ್ಯವನ್ನು ಸಾಗಿಸುತ್ತಿದ್ದ ಗೂಡ್ಸ್ ವಾಹನವನ್ನು ಪತ್ತೆ ಹಚ್ಚಿದ ಅಬಕಾರಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಟೆಂಪೋ ಚಾಲಕನನ್ನು ಬಂಧಿಸಿ ಆತನಿಂದ ೯೭.೫ ಲೀನಷ್ಟು ಗೋವಾ ಮದ್ಯವನ್ನು ವಶಪಡಿಸಿಕೊಂಡ ಘಟನೆ ಗುರುವಾರ ತಾಲೂಕಿನ ಕಣಕುಂಬಿ ಬಳಿಯ ಕರ್ನಾಟಕ-ಗೋವಾ ಗಡಿಯ ಚೆಕ್ ಪೋಸ್ಟ್ ಬಳಿ ವರದಿಯಾಗಿದೆ.
ಅಬಕಾರಿ ಇಲಾಖೆಯವರು ಗೋವಾದಿಂದ ಬೆಳಗಾವಿಯತ್ತ ಸಾಗುತ್ತಿದ್ದ ಗೂಡ್ಸ್ ವಾಹನವನ್ನು ತಡೆದು ತಪಾಸಣೆ ನಡೆಸಿದಾಗ ಅದರಲ್ಲಿ ೭೫೦ ಎಂಎಲ್ ಅಳತೆಯ ೧೩೨ ಮತ್ತು ೧೮೦ ಎಂಎಲ್ ಅಳತೆಯ ೧೯೨ ಮದ್ಯದ ಬಾಟಲಿಗಳಲ್ಲಿ ಸಾಗಿಸುತ್ತಿದ್ದ ಗೋವಾ ಮದ್ಯ ಪತ್ತೆಯಾಗಿದೆ.

ಕೂಡಲೇ ಅಬಕಾರಿ ಸಿಬ್ಬಂದಿ ಮದ್ಯ ಸಾಗಾಟಕ್ಕೆ ಬಳಸಿದ ಗೂಡ್ಸ್ ವಾಹನ ವಶಕ್ಕೆ ಪಡೆದು ವಾಹನದ ಚಾಲಕ ಬೆಳಗಾವಿಯ ಮಚ್ಛೆ ನಿವಾಸಿ ಶಂಕರ ಮೋಹನ ಗೋಮಾನಚ ಎಂಬಾತನನ್ನು ವಶಕ್ಕೆ ಪಡೆದಿದ್ದು, ಆತನನ್ನು ಸ್ಥಳೀಯ ನ್ಯಾಯಾಲಯದಲ್ಲಿ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಮದ್ಯ ಮತ್ತು ಮದ್ಯವನ್ನು ಸಾಗಿಸಲು ಉಪಯೋಗಿಸಿದ ಗೂಡ್ಸ್ ವಾಹನ ಸೇರಿದಂತೆ ಒಟ್ಟು ೩.೨೫ ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರೆದಿದೆ. ದಾಳಿಯಲ್ಲಿ ಬೆಳಗಾವಿ ಉಪ ವಿಭಾಗದ ಅಬಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದು, ಸ್ಥಳೀಯ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button