ಮಹಾರಾಷ್ಟ್ರ ಆಯ್ತು, ಗೋವಾ ಸಂಪರ್ಕವೂ ಬಂದ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ರಾಷ್ಟ್ರೀಯ ಹೆದ್ದಾರಿ 4ರ ಜೊತೆಗೆ 4ಎ ಸಂಪರ್ಕ ಕೂಡ ಕಡಿತಗೊಂಡಿದೆ. ಇದರಿಂದಾಗಿ ಬೆಳಗಾವಿ ಗೋವಾ ಸಂಪರ್ಕ ಸಂಪೂರ್ಣ ಸ್ಥಗಿವಾಗಿದೆ.
ಮಲಪ್ರಭಾ ನದಿ ಉಕ್ಕಿ ಹರಿಯುತ್ತಿದ್ದು, ಎಲ್ಲ ಸೇತುವೆಗಳೂ ಮುಳುಗಿವೆ. ಖಾನಾಪುರ ತಾಲೂಕಿನ 60ಕ್ಕೂ ಹೆಚ್ಚು ಗ್ರಾಮಗಳು ಸಂಪರ್ಕ ಕಡಿದುಕೊಡಿವೆ. ಬೆಳಗಾವಿ ಸಂಪರ್ಕಿಸುವ ಖಾನಾಪುರ-ತಾಳಗುಪ್ಪ ಹೆದ್ದಾರಿ ಸಂಪರ್ಕವೂ ಕಡಿತಗೊಂಡಿದೆ.
ಇದನ್ನೂ ಓದಿ – ನಾಳೆ, ನಾಡಿದ್ದು ಶಾಲೆಗಳಿಗೆ ರಜೆ
ಬೆಳಗಾವಿ- ಮಹಾರಾಷ್ಟ್ರ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 4ರ ಸಂಪರ್ಕ ಕಲ್ಪಿಸುವ ಕೆಲಸ ಭರದಿಂದ ನಡೆಯುತ್ತಿದೆ.
ಈ ಮಧ್ಯೆ ಎಲ್ಲ ಕಡೆ ಮಳೆಯ ಅಬ್ಬರ ಇನ್ನೂ ಮುಂದುವರಿದಿದೆ. ಬೆಳಗಾವಿ ನಗರದಲ್ಲಿ ಬಹುತೇಕ ಅಪಾರ್ಟ್ ಮೆಂಟ್ ಗಳಲ್ಲಿ ಸಹ ನೀರು ತುಂಬಿಕೊಂಡಿದೆ. ಸಾವಿರಾರು ಮನೆಗಳಿಗೆ ನೀರು ನುಗ್ಗಿದೆ. ಹಲವೆಡೆ ವಿದ್ಯುತ್ ಸಂಪರ್ಕ ಕೂಡ ಕಡಿತವಾಗಿದೆ. ಕೃಷ್ಣಾ ನದಿ ಪ್ರವಾಹ ಕೂಡ ಹೆಚ್ಚುತ್ತಿದ್ದು, ನದಿ ತೀರದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಇದನ್ನೂ ಓದಿ – ಪ್ರವಾಹಕ್ಕೆ ಸಿಲುಕಿದ್ದ ಜಾನುವಾರುಗಳ ರಕ್ಷಣೆಗೆ ಹೋದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವು
ಮಳೆ ಅವಾಂತರ; ಸಹಕರಿಸಲು ಹೆಸ್ಕಾಂ ಮನವಿ ; ಹೆಚ್ಚುವರಿ ಸಿಬ್ಬಂದಿ ಬೇಡಿಕೆ
ಧಾರವಾಡದಲ್ಲೂ ಎಲ್ಲ ಶಾಲೆಗಳಿಗೆ 2 ದಿನ ರಜೆ
ದಿನ ಭವಿಷ್ಯ: ಪ್ರತಿ ದಿನ ಸಂಕ್ಷಿಪ್ತ ಭವಿಷ್ಯ ( 06 ಆಗಸ್ಟ್ 2019)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ