
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗೋವಾದ ದೂಧಸಾಗರ್ ಜಲಪಾತದಲ್ಲಿ ಮಳೆಯಿಂದಾಗಿ ಕೇಬಲ್ ಸೇತುವೆ ಕುಸಿದುಬಿದ್ದಿದ್ದು 40 ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದೆ.
ಶುಕ್ರವಾರ ಸಂಜೆ ಭಾರೀ ಮಳೆಯ ನಡುವೆ ಜಲಪಾತದಲ್ಲಿ ನೀರಿನ ಮಟ್ಟ ಏರಿಕೆಯಾಯಿತು. ಈ ವೇಳೆ ಕೇಬಲ್ ಸೇತುವೆ ಏಕಾಏಕಿ ಕುಸಿತಕ್ಕೊಳಗಾಯಿತು.
ಈ ವೇಳೆ ಸೇತುವೆಯಲ್ಲಿ ಪ್ರವಾಸಿಗರಿದ್ದರು. ತಕ್ಷಣದಲ್ಲಿ ಕಾರ್ಯಪ್ರವೃತ್ತರಾದ ರಿವರ್ ಲೈಫ್ ಸೇವರ್ ಗಳು ಸುಮಾರು 40 ಪ್ರವಾಸಿಗರನ್ನು ರಕ್ಷಿಸಿದ್ದಾರೆ.
ಈ ಕುರಿತು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ ಟ್ವೀಟ್ ಮಾಡಿದ್ದು ಜನರ ಜೀವ ರಕ್ಷಣೆ ಮಾಡಿದ ರಿವರ್ ಲೈಫ್ ಸೇವರ್ ಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಪ್ರಹ್ಲಾದ ಜೋಶಿಯವರನ್ನು ಹೊಗಳಿದ ರಾಜಸ್ಥಾನ್ ಮುಖ್ಯಮಂತ್ರಿ