ಪ್ರಗತಿ ವಾಹಿನಿ ಸುದ್ದಿ, ಗೋಕಾಕ –
ಆಸ್ತಿ ವಿವಾಧದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಗುಂಡು ಹೊಡೆದು ಕೊಂದಿದ್ದ ಆರೋಪಿಗೆ ಗೋಕಾಕದ ೧೨ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪೀಠವು ಜೀವಾವಧಿ ಶಿಕ್ಷೆ ವಿಧಿಸಿದೆ.
ರಾಜಾಪೂರ ಗ್ರಾಮದ ಗೋಪಾಲ ಭೀಮಪ್ಪ ಮೇಟಿ ತನ್ನ ಸಹೋದರ ಸಂಬಂಧಿ ಚಿಂತಾಮಣಿ ರಾಮಪ್ಪ ಮೇಟಿಯೊಂದಿಗೆ ಆಸ್ತಿ ವ್ಯಾಜ್ಯ ಹೊಂದಿದ್ದ.೧-೫- ೨೦೨೦ರ ರಂದು ಚಿಂತಾಮಣಿ ಮೇಟಿಯುತನ್ನ ಪುತ್ರ ರಾಜಶೇಖರ ಮೇಟಿಯೊಂದಿಗೆ ವ್ಯಾಜ್ಯದಲ್ಲಿದ್ದ ಜಮೀನಿನಲ್ಲಿ ರಂಟೆ ಹೊಡೆಯುತ್ತಿದ್ದಾಗ ಅಲ್ಲಿಗೆ ಬೆಳೆ ರಕ್ಷಣೆಗೆ ಲೈಸೆನ್ಸ್ ನೀಡಲಾಗಿದ್ದ ಬಂದೂಕನ್ನು ಹೆಗಲಿಗೆ ಹಾಕಿಕೊಂಡುಬಂದ ಗೋಪಾಲ ಮೇಟಿ, ಜಮೀನು ತನ್ನದಾಗಿದ್ದು ಇಲ್ಲಿ ನೀನು ಕೃಷಿ ಕೆಲಸ ಮಾಡುವಂತಿಲ್ಲ ಎಂದು ತಕರಾರು ತೆಗೆದಿದ್ದ. ಪರಸ್ಪರ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು ಗೋಪಾಲ ಮೇಟಿಯು ಚಿಂತಾಮಣಿ ಮೇಟಿಗೆ ಬೆಳೆ ರಕ್ಷಣೆಯ ಬಂದೂಕಿನಿಂದ ಗುಂಡು ಹಾರಿಸಿದ್ದ. ಹೊಟ್ಟೆ ಮತ್ತು ಎದೆಯ ಭಾಗದಲ್ಲಿ ತೀವ್ರವಾಗಿ ಗಾಯಗೊಂಡ ಚಿಂತಾಮಣಿ ಮೇಟಿ ಮೃತಪಟ್ಟಿದ್ದ.
ಮೂಡಲಗಿ ಸಿಪಿಐ ವಿ. ಎಸ್. ಮುರನಾಳ ಅವರು ಪ್ರಕರಣ ಅವರು ಪ್ರಕರಣ ದಾಖಲಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಆರೋಪ ಸಾಬೀತಾಗಿದ್ದು ಆರೋಪಿ ಗೋಪಾಲ ಮೇಟಿಗೆ ನ್ಯಾಯಾಧೀಶರು ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಸರಕಾರಿ ಅಭಿಯೋಜಕ ರಾಜಮಹೇಂದ್ರ ಜಿ. ಕರಣಗಿ ಅವರು ಸರಕಾರದ ಪರವಾಗಿ ವಾದ ಮಂಡಿಸಿದ್ದರು.
ಬೆಳಗಾವಿ: ತಮ್ಮನನ್ನು ಕಡಿದು ಕೊಲೆ ಮಾಡಿದಾತನಿಗೆ ಜೀವಾವಧಿ ಶಿಕ್ಷೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ