Kannada NewsKarnataka NewsLatest

ಶಿವಚರಿತ್ರೆ ಉದ್ಘಾಟನೆ ಸನ್ನಿಹಿತ; ಲೋಕಾರ್ಪಣೆಗೆ ಯೋಗಿ ಆದಿತ್ಯನಾಥ ಅವರಿಗೆ ಆಹ್ವಾನ – ಅಭಯ ಪಾಟೀಲ

ಶಿವಚರಿತ್ರೆ ನಿರ್ಮಾಣ ಅಭಯ ಪಾಟೀಲ ಅವರ ಕನಸು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ಇಲ್ಲಿಯ ಛತ್ರಪತಿ ಶಿವಾಜಿ ಮಹಾರಾಜ ಗಾರ್ಡನ್‌ನಲ್ಲಿರುವ ಶಿವ ಚರಿತ್ರೆ ಉದ್ಘಾಟನೆ ಸನ್ನಿಹಿತವಾಗಿದೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಉದ್ಘಾಟನೆಗೆ ಆಹ್ವಾನಿಸಲಾಗುವುದು.  ಏಪ್ರಿಲ್ ತಿಂಗಳಲ್ಲೇ ಉದ್ಘಾಟನೆಯಾಗಲಿದೆ ಎಂದು ಶಾಸಕ ಅಭಯ ಪಾಟೀಲ ತಿಳಿಸಿದ್ದಾರೆ.

Home add -Advt

ಶಿವಚರಿತ್ರೆ ನಿರ್ಮಾಣ ಅಭಯ ಪಾಟೀಲ ಅವರ ಕನಸು. ಶಿವಾಜಿ ಗಾರ್ಡನ್‌ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜೀವನವನ್ನು ಬಿಂಬಿಸಲು ಪ್ರತಿಕೃತಿ ಮತ್ತು ಉದ್ಯಾನವನವನ್ನು ನಿರ್ಮಿಸುವ ಕೆಲಸವನ್ನು ನಗರಾಭಿವೃದ್ಧಿ ಪ್ರಾಧಿಕಾರದ ಮೂಲಕ ಜಾರಿಗೊಳಿಸಲಾಗಿದೆ. ಇದಕ್ಕಾಗಿ ಸುಮಾರು 10 ಕೋಟಿ ರೂ. ವೆಚ್ಚವಾಗಿದೆ.

ಶಾಂತಿ ಮತ್ತು ಪ್ರಗತಿಗೆ ಕರ್ನಾಟಕ ಹೆಸರುವಾಸಿ: ಎಲ್ಲರೂ ಸಂಯಮದಿಂದ ವರ್ತಿಸಿ; ಸಿಎಂ ಮನವಿ

Related Articles

Back to top button