Kannada NewsKarnataka News

ಗೋಕಾಕಲ್ಲಿ ಗುರುವಾರ ಜಗದ್ಗುರು ವಂದನಾ ಸಮಾವೇಶ

ಪ್ರಗತಿವಾಹಿನಿ ಸುದ್ದಿ, ಗೋಕಾಕ: ಗೋಕಾಕದಲ್ಲಿ ಪಂಚಮಸಾಲಿ ಸಮಾಜದಿಂದ ಗುರುವಾರ ಜಗದ್ಗುರು ವಂದನಾ ಸಮಾವೇಶ ನಡೆಯಲಿದೆ.

ಪಂಚಮಸಾಲಿ ಹಾಗೂ ಎಲ್ಲಾ ಲಿಂಗಾಯತ ಒಳ ಪಂಗಡಗಳಿಗೆ ಐತಿಹಾಸಿಕ ಹೋರಾಟದ ಮೂಲಕ 2D ಮೀಸಲಾತಿ ದೊರಕಿಸಿ ಪ್ರಥಮ ಜಯ ತಂದು ಕೊಟ್ಟ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಪ್ರಥಮ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಮಹಾಸ್ವಾಮಿಗಳವರ ವಿಜಯೋತ್ಸವಕ್ಕೆ ಗೋಕಾಕ ಹಾಗೂ ಮೂಡಲಾಗಿ ಲಿಂಗಾಯತ ಪಂಚಮಸಾಲಿ ತಾಲೂಕ ವತಿಯಿಂದ ಜಗದ್ಗುರುವಂದನಾ ಸಮಾರಂಭ ಆಯೋಜಿಸಲಾಗಿದೆ.
ಗುರುವಾರ ಬೆಳಿಗ್ಗೆ 10 ಗಂಟೆಗೆ ಘಟಪ್ರಭಾ ರಸ್ತೆಯ ಗೋಕಾಕ್ ಸಮುದಾಯ ಭವನದಲ್ಲಿ ಸಮಾವೇಶ ನಡೆಯಲಿದೆ.

ಸಮಾಜದವರು ಆಗಮಿಸಿ ಜಗದ್ಗುರುಗಳ ಆಶೀರ್ವಾದ ಪಡೆಯಬೇಕು ಎಂದು ಜಿಲ್ಲಾ ಕಾರ್ಯಧ್ಯಕ್ಷ ನಿಂಗಪ್ಪ ಫಿರೋಜಿ ಹಾಗೂ ತಾಲೂಕು ಅಧ್ಯಕ್ಷ ಪ್ರಕಾಶ್ ಬಾಗೋಜಿ ವಿನಂತಿಸಿದ್ದಾರೆ.

Home add -Advt
https://pragati.taskdun.com/nomination-paper-submission-will-start-from-tomorrow-where-how-here-is-the-detail/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button