Latest

ಏಕಾಏಕಿ ಏರಿದ ಚಿನ್ನ, ಬೆಳ್ಳಿ ದರ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಎರಡು ದಿನಗಳ ಹಿಂದಷ್ಟೇ ದರ ಇಳಿಕೆಯಿಂದ ಗ್ರಾಹಕರ ಖುಷಿಗೆ ಕಾರಣವಾಗಿದ್ದ ಚಿನ್ನ ಮತ್ತು ಬೆಳ್ಳಿ ದರ ಬುಧವಾರ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ.

ಮಂಗಳವಾರ 55,700 ರೂ. ಆಗಿದ್ದ 10 ಗ್ರಾಂ ಚಿನ್ನದ ದರ ಒಮ್ಮೆಲೇ 200 ರೂ. ಏರಿಕೆಯಾಗಿದ್ದು, 55,900 ರೂ. ಆಗಿದೆ. ಬೆಳ್ಳಿ ಬೆಲೆಯಲ್ಲಿ ಇಂದು 700 ರೂ. ಏರಿಕೆಯಾಗಿದ್ದು, ಒಂದು ಕೆಜಿ ಬೆಳ್ಳಿ ಬೆಲೆ 80,700 ರೂ. ಆಗಿದೆ.

ರಾಜ್ಯದ ಬೆಂಗಳೂರು, ಮೈಸೂರು, ದಾವಣಗೆರೆ, ಹುಬ್ಬಳ್ಳಿ- ಧಾರವಾಡ ಸೇರಿದಂತೆ ಪ್ರಮುಖ ನಗರಗಳಲ್ಲಿ ಇದೇ ಬೆಲೆಯಲ್ಲಿ ಮಾರಾಟವಾಗುತ್ತಿದೆ.

ಹೈದರಾಬಾದ್ ಮತ್ತಿತರ ನಗರಗಳಲ್ಲಿ 10 ಗ್ರಾಂನ 24 ಕ್ಯಾರೆಟ್ ಚಿನ್ನದ ಬೆಲೆ- 60,930 (220 ರೂ. ಏರಿಕೆ) ಆಗಿದೆ. ನಿನ್ನೆ 60,710 ದರವಿತ್ತು.

Home add -Advt

https://pragati.taskdun.com/priyanka-gandhimysore-mailari-hoteldoseidli/

https://pragati.taskdun.com/tamil-naducyclonekarnatakarain/
https://pragati.taskdun.com/d-k-shivakumarpressmeetreservationmysiore/

Related Articles

Back to top button