
ಪ್ರಗತಿವಾಹಿನಿ ಸುದ್ದಿ: ಶುಭ ಕಾರ್ಯಗಳಿಗೆ ಚಿನ್ನ ಮತ್ತು ಬೆಳ್ಳಿ ಖರೀದಿ ಮಾಡಲು ಪ್ಲ್ಯಾನ್ ಮಾಡಿಕೊಂಡವರಿಗೆ ಶಾಕ್ ಎದಿರಾಗಿದೆ. ಹಿಂದೆಂದು ಏರಿಕೆ ಆಗದ ಗರಿಷ್ಠ ಮಟ್ಟಕ್ಕೆ ಚಿನ್ನ ಮತ್ತು ಬೆಳ್ಳಿ ಬೆಲೆ ತಲುಪಿದೆ.
ದಸರಾ ಮತ್ತು ದೀಪಾವಳಿಯೊಂದಿಗೆ ಮುಂಬರುವ ಹಬ್ಬದ ಕಾರಣದಿಂದ ಗ್ರಾಹಕರ ಬೇಡಿಕೆ ಚಿನ್ನದ ವಿಚಾರದಲ್ಲಿ ಮತ್ತಷ್ಟು ಹೆಚ್ಚುವ ಸಾಧ್ಯತೆ ಇರುವುದರಿಂದ ಬೆಲೆಗಳು ಇನ್ನೂ ಹೆಚ್ಚಾಗಬಹುದು.
ಬೆಳ್ಳಿ ಬೆಲೆ ಎಷ್ಟಿದೆ..?
ಈ ಬಾರಿ ಬೆಳ್ಳಿ ಬೆಲೆ ಗರಿಷ್ಠ ಮಟ್ಟವನ್ನ ತಲುಪಿದ್ದು, ಪ್ರತಿ ಕಿಲೋಗ್ರಾಂಗೆ 1,000 ರಷ್ಟು ಏರಿಕೆಯಾಗಿ ₹1,26,000 ಕ್ಕೆ ತಲುಪಿದ್ದು, 100 ಗ್ರಾಂ ಚಿಲ್ಲರೆ ಮಾರಾಟ ₹12,600 ಕ್ಕೆ ಏರಿದೆ. ಜಾಗತಿಕ ಬೆಲೆ ಏರಿಕೆಯ ಕಾರಣದಿಂದ ಬೇಡಿಕೆ ಸಹ ಹೆಚ್ಚಾದ ಕಾರಣ ಬೆಳ್ಳಿ ಕೂಡ ಹೊಸ ಗರಿಷ್ಠ ಮಟ್ಟವನ್ನು ತಲುಪಿದೆ ಎಂದು ಅಂದಾಜಿಸಲಾಗುತ್ತಿದೆ.
ಚಿನ್ನದ ಬೆಲೆ ಎಷ್ಟಿದೆ.?
ಇಂದು ಅಂದರೆ ಸೆಪ್ಟೆಂಬರ್ 1 ರಂದು, 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ₹930 ರಷ್ಟು ಏರಿಕೆಯಾಗಿ ₹105,880 ರೂ ಆಗಿದೆ. ಹಾಗೆಯೇ, 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ₹850 ರಷ್ಟು ಏರಿಕೆಯಾಗಿದ್ದು ₹97,050 ರೂ ಆಗಿದೆ ಎನ್ನಲಾಗಿದೆ.
18 ಕ್ಯಾರೆಟ್ ಚಿನ್ನದ ಬೆಲೆ ಎಷ್ಟು?
ಇನ್ನು 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 10 ಗ್ರಾಂಗೆ ₹700 ರಷ್ಟು ಏರಿಕೆಯಾಗಿ ₹79,410 ಕ್ಕೆ ಅದರ ಬೆಲೆ ತಲುಪಿದ್ದು, 100 ಗ್ರಾಂಗೆ, 24 ಕ್ಯಾರೆಟ್ ಚಿನ್ನದ ಬೆಲೆ ಈಗ ₹1,058,800 ಆಗಿದ್ದರೆ, 22 ಕ್ಯಾರೆಟ್ ಚಿನ್ನದ ಬೆಲೆ ₹970,500 ಆಗಿದೆ.