Kannada NewsLife StyleNational

*ಗಣಪತಿ ಹಬ್ಬದ ದಿನದಂದು ಭರ್ಜರಿ ಇಳಿಕೆ ಕಂಡ ಚಿನ್ನ*

ಪ್ರಗತಿವಾಹಿನಿ ಸುದ್ದಿ: ಆಭರಣ ಪ್ರಿಯರಿಗೆ ಗಣೇಶ ಚತುರ್ಥಿ ಹಬ್ಬದ ದಿನದಂದೇ ಗುಡ್‌ನ್ಯೂಸ್ ಸಿಕ್ಕಿದೆ. ಜಾಗತಿಕ ಮಟ್ಟದಲ್ಲಿ ಹಾಗೂ ದೇಶೀಯ ಮಾರುಕಟ್ಟೆಯಲ್ಲಿ ಶನಿವಾರ ಚಿನ್ನದ ಬೆಲೆ ಭಾರೀ ಇಳಿಕೆಯಾಗಿದೆ. 

ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಶನಿವಾರ ದಿಢೀರ್ ಇಳಿಕೆ ಕಂಡಿದೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂ 400 ರೂಪಾಯಿ ಇಳಿಕೆಗೊಂಡಿದ್ದು 66,950 ರೂಪಾಯಿ ತಲುಪಿದೆ. 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ 10 ಗ್ರಾಂ 440 ರೂಪಾಯಿ ತಗ್ಗಿದ್ದು, 73,020 ರೂಪಾಯಿ ಮುಟ್ಟಿದೆ. ಬೆಳ್ಳಿ ಬೆಲೆ ಕೆಜಿಗೆ 100 ರೂಪಾಯಿ ಏರಿಕೆಗೊಂಡು 87,100 ರೂಪಾಯಿ ತಲುಪಿದೆ.

ಬೆಂಗಳೂರಿನಲ್ಲಿ 24 ಕ್ಯಾರೆಟನ ಪ್ರತಿ 10 ಗ್ರಾಂ ಗೆ 73,040 ರೂಪಾಯಿಗೆ ತಲುಪಿದೆ. 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂ ಗೆ 66,970 ರೂಪಾಯಿ ತಲುಪಿದೆ.

Home add -Advt

Related Articles

Back to top button