ಪ್ರಗತಿವಾಹಿನಿ ಸುದ್ದಿ: ದೇಶದಲ್ಲಿ ಕಳೆದೊಂದು ವಾರದಿಂದ ಚಿನ್ನ, ಬೆಳ್ಳಿ ದರ ಇಳಿಮುಖವಾಗುತ್ತಿದೆ. ಇಂದು ಕೂಡಾ ಕೊಂಚ ತಗ್ಗಿದೆ. ಪ್ರತಿ ಗ್ರಾಂ 24 ಕ್ಯಾರೆಟ್ ಬಂಗಾರಕ್ಕೆ 44 ರೂಪಾಯಿ ಹಾಗೂ 22 ಕ್ಯಾರೆಟ್ ಚಿನ್ನಕ್ಕೆ 39 ರೂಪಾಯಿ ಕಡಿಮೆಯಾಗಿದೆ. ಇದೇ ವೇಳೆ, ಪ್ರತಿ ಕೆಜಿ ಬೆಳ್ಳಿ ದರ 140 ರೂಪಾಯಿ ಇಳಿಕೆಯಾಗಿದೆ.
ಕೇಂದ್ರ ಬಜೆಟ್ ಹಾಗೂ ಇತರ ಪರಿಣಾಮಗಳ ಕಾರಣದಿಂದ ಕಳೆದ ಒಂದು ವಾರದ ಅವಧಿಯಲ್ಲಿ ಹಳದಿ ಲೋಹ ಹಾಗೂ ಬೆಳ್ಳಿ ಬೆಲೆ ಇಳಿಕೆಯಾಗುತ್ತಿದೆ. ಮಂಗಳವಾರ ಮಂಡನೆಯಾದ ಬಜೆಟ್ನಲ್ಲಿ ಚಿನ್ನ, ಬೆಳ್ಳಿ ಸೇರಿದಂತೆ ಹಲವು ಉತ್ಪನ್ನಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ.15ರಿಂದ ಶೇ.6ಕ್ಕೆ ಕೇಂದ್ರ ಸರ್ಕಾರ ಕಡಿತಗೊಳಿಸಿದೆ. ಇವುಗಳ ಪರಿಣಾಮದಿಂದ ಪ್ರತಿ 10 ಗ್ರಾಂ ಚಿನ್ನಕ್ಕೆ 4,000 ರೂಪಾಯಿ ತಗ್ಗಿದೆ. ಅದೇ ರೀತಿ ಬೆಳ್ಳಿ ಪ್ರತಿ ಕೆಜಿಗೆ 5,000 ರೂಪಾಯಿ ಕಡಿಮೆಯಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲೂ ಸ್ವಲ್ಪ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ 64,940 ರೂ. ಹಾಗೂ 24 ಕ್ಯಾರೆಟ್ 70,850 ರೂ. ಬೆಲೆ ಇದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ