Latest

ದಾಖಲೆ ಮಟ್ಟಕ್ಕೆ ಜಿಗಿದ ಚಿನ್ನದ ದರ

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ದೇಶದ ರಾಜಧಾನಿ ಹೊಸದಿಲ್ಲಿಯಲ್ಲಿ ಗುರುವಾರ ಶುದ್ಧ ಚಿನ್ನದ ದರ 10 ಗ್ರಾಂಗೆ 940 ರೂ. ಏರಿಕೆಯಾಗಿದ್ದು ಇದು ಈವರೆಗಿನ ಅತ್ಯಂತ ಗರಿಷ್ಠ ದಾಖಲೆ ಮಟ್ಟದ ದರವಾಗಿದೆ ಎಂದು ಎಚ್ ಡಿಎಫ್ ಸಿ ಸೆಕ್ಯುರಿಟೀಸ್ ತಿಳಿಸಿದೆ.

ಅಂತಾರಾಷ್ಟ್ರೀಯ ಮಟ್ಟದ ಮಾರುಕಟ್ಟೆಯ ಪ್ರಭಾವದಿಂದ ದೇಶೀಯ ಮಾರುಕಟ್ಟೆಯಲ್ಲೂ ಚಿನ್ನದ ದರ ಏರಿಕೆಯಾಗಿರುವುದಾಗಿ ಎಚ್ ಡಿಎಫ್ ಸಿ ಸೆಕ್ಯುರಿಟೀಸ್ ನ ಮಾರುಕಟ್ಟೆ ವಿಭಾಗದ ಹಿರಿಯ ವಿಶ್ಲೇಷಕ ಸೌಮಿಲ್ ಗಾಂಧಿ ಹೇಳಿದ್ದಾರೆ.

ಈ ಹಿಂದಿನ ವಹಿವಾಟಿನಲ್ಲಿ ಪ್ರತಿ 10 ಗ್ರಾಂ ಗೆ 61080 ರೂ. ದರವಿತ್ತು. ಬೆಂಗಳೂರಿನಲ್ಲಿ ಶುದ್ಧ ಚಿನ್ನದ ದರ 61,740 ರೂ. ಇದ್ದು, ಆಭರಣ ಚಿನ್ನದ ದರ 57,000 ರೂ. ಇದೆ.

ದಿಲ್ಲಿಯಲ್ಲಿ ಬೆಳ್ಳಿಯ ದರವೂ ಪ್ರತಿ 1ಕೆಜಿಗೆ 660 ರೂ. ಏರಿಕೆಯಾಗಿದ್ದು 76,700 ರೂ. ಆಗಿದೆ. ಬೆಂಗಳೂರಿನಲ್ಲಿ 78, 300 ರೂ. ಆಗಿದೆ.

Home add -Advt

ಗುರುವಾರ ಏಷ್ಯನ್ ವಹಿವಾಟಿನ ವೇಳೆ ದರದಲ್ಲಿ ಏರಿಕೆ ಕಂಡುಬಂದಿದೆ. ಅಮೆರಿಕದ ಫೆಡ್ ರಿಸರ್ವ್ ತನ್ನ ಬಡ್ಡಿ ದರವನ್ನು ಶೇ.0.25ಕ್ಕೆ ಏರಿಸಿದ್ದು, ಮುಂದಿನ ಸಭೆಯಿಂದ ದರ ಏರಿಕೆ ಮಾಡುವುದಿಲ್ಲ ಎಂದು ತಿಳಿಸಿದೆ.

https://pragati.taskdun.com/pm-narendra-modibangalore-visitraod-banda/
https://pragati.taskdun.com/police-constableshoot-deathkalaburgi/
https://pragati.taskdun.com/karnatakaheavy-rain3-daysimdcyclone-effect/

Related Articles

Back to top button