*ಏಪ್ರಿಲ್ ತಿಂಗಳ ಮೊದಲ ವಾರದಲ್ಲೇ ಚಿನ್ನದ ಬೆಲೆ ಭರ್ಜರಿ ಏರಿಕೆ*

ಪ್ರಗತಿವಾಹಿನಿ ಸುದ್ದಿ: ಮಾರ್ಚ್ ತಿಂಗಳಲ್ಲಿ ಕೊಂಚ ಮಟ್ಟಿಗೆ ಇಳಿಕೆ ಕಂಡಿದ್ದ ಚಿನ್ನದ ದರ ಇದೀಗ ಏಪ್ರಿಲ್ ತಿಂಗಳ ಮೊದಲ ವಾರದಲ್ಲೇ ಭರ್ಜರಿ ಏರಿಕೆ ಕಂಡಿದ್ದು ಪ್ರತಿ ಗ್ರಾಂಗೆ 40 ರಿಂದ 55 ರೂಪಾಯಿ ನಷ್ಟು ಏರಿಕೆಯಾಗಿದೆ.
ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಇಂದು ಹೆಚ್ಚಳ ಕಂಡಿದೆ. ಆಭರಣ ಚಿನ್ನದ ಬೆಲೆ 8,560 ರೂಗೆ ಏರಿದೆ. 24 ಕ್ಯಾರೆಟ್ ಚಿನ್ನದ ದರ 54 ರೂ ಹೆಚ್ಚಳ ಆಗಿ 9,300 ರೂ ದಾಟಿದೆ. 18 ಕ್ಯಾರಟ್ ಚಿನ್ನದ ಬೆಲೆ ಮೊದಲ ಬಾರಿಗೆ 7,000 ರೂ ಗಡಿ ದಾಟಿದೆ.
ಬೆಂಗಳೂರಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 85,600 ರೂ ಇದೆ. ಅಲ್ಲದೇ, ಚೆನ್ನೈ, ಕೇರಳ, ಹೈದರಾಬಾದ್, ಕೋಲ್ಕತಾ, ಮುಂಬೈನಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್ ಗೆ 85,600 ರೂ. ಇದ್ದರೆ, ದೆಹಲಿಯಲ್ಲಿ 85700 ರೂ. ನಷ್ಟಿದೆ.
ಇನ್ನು 24 ಕ್ಯಾರೆಟ್ ಚಿನ್ನದ ಬೆಲೆ ಕೂಡ ಬೆಂಗಳೂರು, ಚೆನ್ನೈ, ಕೇರಳ, ಹೈದರಾಬಾದ್, ಕೋಲ್ಕತಾ, ಮುಂಬೈನಲ್ಲಿ 9338 ರೂ.ನಷ್ಟಿದ್ದರೆ, ದೆಹಲಿಯಲ್ಲಿ ಮಾತ್ರ 9,353 ನಷ್ಟಿದೆ. ಇನ್ನು ಬೆಳ್ಳಿ ಬೆಲೆ ರಾಜ್ಯದಲ್ಲಿ ಒಂದು ಕೆಜಿಗೆ 1,04,900 ರೂಪಾಯಿ ನಷ್ಟಿದೆ.