CrimeKarnataka NewsLatest

*ಚಿನ್ನ ಖರೀದಿಸಲೆಂದು ಬಂದಿದ್ದವನಿಗೆ ಮಹಿಳೆ ಜೊತೆ ಸೇರಿ ಚಿನ್ನದಂಗಡಿ ಮಾಲೀಕನಿಂದಲೇ 2 ಕೋಟಿ ವಂಚನೆ*

ಪ್ರಗತಿವಾಹಿನಿ ಸುದ್ದಿ: ಚಿನ್ನ ಖರೀದಿಸಲೆಂದು ಬಂದಿದ್ದವರಿಗೆ ಚಿನ್ನದ ಅಂಗಡಿ ಮಾಲೀಕನೇ ಮಹಿಳೆಯೊಂದಿಗೆ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.

ಬೆಂಗಳೂರಿನ ಹೆಚ್‌ಎಸ್‌ಆರ್‌ ಲೇಔಟ್ ನಲ್ಲಿರುವ ಎಂಪಿ ಚಿನ್ನದ ಅಂಗಡಿ ಮಾಲೀಕ ಇಂದರ್ ಚಂದ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಸರ್ಜಾಪುರ ಮೂಲದ ಪುನೀತ್ ಎಂಬಾತ ಚಿನ್ನ ಖರೀದಿ ಮಾಡಲು ಯೋಜಿಸಿದ್ದರು. ಈ ವೇಳೆ ಸಂಬಂಧಿ ಸವಿತಾ ರೆಡ್ಡಿ ಹೆಚ್‌ಎಸ್‌ಆರ್‌ ಲೇಔಟ್ ನಲ್ಲಿರುವ ಎಂಪಿ ಚಿನ್ನದ ಮಳಿಗೆಯಲ್ಲಿ ಚಿನ್ನ ಕಡಿಮೆ ಬೆಲೆ ಹಾಗೂ ವೆಸ್ಟೆಜ್ ಚಾರ್ಜ್ ತುಂಬಾನೇ ಕಡಿಮೆ ಇರುತ್ತೆ ಎಂದು ನಂಬಿಸಿದ್ದಾಳೆ.

ಸವಿತಾ ರೆಡ್ಡಿಯ ಮಾತು ಕೇಳಿ ಪುನೀತ್ ಎರಡು ಕೋಟಿ ನಗದು ಹಣದೊಂದಿಗೆ ಎಂಪಿ ಚಿನ್ನದ ಮಳಿಗೆಗೆ ಹೋಗಿದ್ದಾರೆ. 90 ಲಕ್ಷ ರೂ.ನ ಎರಡು ಕಾಟನ್ ಬಾಕ್ಸ್ ಹಾಗೂ 20 ಲಕ್ಷ ರೂಪಾಯಿಯ ಒಂದು ಬಾಗ್ ಇಸ್ಕೊಂಡು ಅರ್ಧ ಗಂಟೆ ಹೊರಗಡೆ ಇರಿ ನಿಮ್ಮ ದುಡ್ಡು ಸರಿ ಇದೆ ಎಂದು ನಂಬಿಸಿ ಒಳಗಡೆ ಹೋದವರೇ ಮರಳಿ ಬರಲಿಲ್ಲ.

ಸಿಬ್ಬಂದಿ ಕೇಳಿದರೆ ಮಾಲೀಕರ ಜೊತೆ ಮಾತನಾಡಿ ಅಂತ ಪುನೀತ್‌ ಕುಟುಂಬಸ್ಥರನ್ನ ದಬಾಯಿಸಿ ಕಳಿಸಿದ್ದಾರೆ. ಮಾಲೀಕನಿಗೆ ಫೋನ್‌ ಮಾಡಿದ್ದರೆ, ಮಹಿಳೆ ಸವಿತಾ ರೆಡ್ಡಿಗೆ ಮಾತನಾಡಿದ್ದೀನಿ ಅಲ್ಲೇ ಮಾತನಾಡಿಕೊಳ್ಳಿ ಎಂದು ಉಡಾಫೆ ಉತ್ತರ ಕೊಟ್ಟು ಕೈ ತೊಳೆದುಕೊಂಡಿದ್ದಾನೆ. 2 ಕೋಟಿ ಹಣ ಕೊಟ್ಟು ಕಂಗಾಲಾಗಿರುವ ಪುನೀತ್ ಹೆಚ್‌ಎಸ್‌ಆರ್ ಲೇಔಟ್ ಪೊಲೀಸರಿಗೆ ದಾಖಲೆ ಸಮೇತವಾಗಿ ದೂರು ನೀಡಿದ್ದಾರೆ. ‌

ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಂಚಕರ ವಿರುದ್ಧ ಇದುವರೆಗೂ ಕಾನೂನು ಕ್ರಮ ಕೈಗೊಂಡಿಲ್ಲ. ಪೊಲೀಸರು ಕೂಡ ಅವರ ಜೊತೆಯಲ್ಲಿ ಶಾಮೀಲಾಗಿದ್ದೆ ಪುನೀತ್ ಆರೋಪಿಸಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button