Belagavi NewsBelgaum NewsKannada NewsKarnataka NewsLatest

*ಬೆಳಗಾವಿಯಲ್ಲಿ ಏಕಾಏಕಿ ಅಬ್ಬರಿಸಿದ ಮಳೆ: ಬಿಸಿಲ ಝಳದಿಂದ ಕಂಗೆಟ್ಟವರಿಗೆ ತಂಪೆರೆದ ವರುಣ*

ಪ್ರಗತಿವಾಹಿನಿ ಸುದ್ದಿ: ರಣ ಬಿಸಿಲ ಹೊಡೆತಕ್ಕೆ ಕಾದ ಕಾವಲಿಯಂತಾಗಿದ್ದ ಬೆಳಗಾವಿಯಲ್ಲಿ ಏಕಾಏಕಿ ಮಳೆ ಅಬ್ಬರಿಸಿದೆ. ಉರಿ ಬಿಸಿಲಿನಿಂದ ಕಂಗೆಟ್ಟವರಿಗೆ ಮಳೆರಾಯ ತಂಪೆರೆದಿದ್ದಾನೆ.

ಬೆಳಗಾವಿ ನಗರದಲ್ಲಿ ದಿಢೀರ್ ಮಳೆ ಸುರಿಯುತ್ತಿದ್ದು, ಏಕಾಏಕಿ ಸುರಿದ ಭಾರಿ ಮಳೆಯಿಂದಾಗಿ ವಾಹನ ಸವಾರರು ಪರದಾಡುವಂತಾಗಿದೆ. ಮತ್ತೊಂದೆಡೆ ಸಿಇಟಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಧರಾಕಾರವಾಗಿ ಸುರುದ ಮಳೆಯಿಂದಾಗಿ ಸಿಇಟಿ ಪರೀಕ್ಷಾ ಕೊಠಡಿಯ ಹೊರಗೆ ಇಟ್ಟಿದ್ದ ವಿದ್ಯಾರ್ಥಿಗಳ ಬ್ಯಾಗ್ ಗಳು ತೊಯ್ದು ಹೋಗಿದ್ದು, ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಎಸ್.ಜಿ.ಬಾಳೆಕುಂದ್ರಿ ಇಂಜಿನಿಯರಿಂಗ ಕಾಲೇಜಿನಲ್ಲಿ ಪರೀಕ್ಷಾ ಕೊಠಡಿಯ ಹೊರ ಭಾಗದಲ್ಲಿ ವಿದ್ಯಾರ್ಥಿಗಳು ಬ್ಯಾಗ್ ಗಳನ್ನು ಇಟ್ಟು ಪರೀಕ್ಷೆ ಬರೆಯುತ್ತಿದ್ದು, ಏಕಾಏಕಿ ಸುರಿದ ಮಳೆಗೆ ವಿದ್ಯಾರ್ಥಿಗಳ ಬ್ಯಾಗ್ ಗಳು ತೊಯ್ದು ತೊಪ್ಪೆಯಾಗಿವೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button