Kannada NewsLatest

ಕುಕ್ಕರ್ ನಲ್ಲಿ ಚಿನ್ನ ಇಟ್ಟು ಬೇಯಿಸಿದ್ರೆ ಫಳಫಳ ಹೊಳೆಯುತ್ತದೆ

ಕುಕ್ಕರ್ ನಲ್ಲಿ ಚಿನ್ನ ಇಟ್ಟು ಬೇಯಿಸಿದ್ರೆ ಫಳಫಳ ಹೊಳೆಯುತ್ತದೆ

ಪ್ರಗತಿವಾಹಿನಿ ಸುದ್ದಿ – ಚಿತ್ತೂರು : ನಿಮ್ಮಲ್ಲಿ ಕೆಲವರು ಈ ಪೋಸ್ಟ್ ನ ಲಿಂಕ್ ಕ್ಲಿಕ್ ಮಾಡಿದ್ದು, ಯಾವುದೋ ಲೈಫ್ ಟಿಪ್ಸ್ ಇರಬೇಕು, ನಾವು ನಮ್ಮ ಚಿನ್ನ ಕುಕ್ಕರ್ ಅಲ್ಲಿ ಇಟ್ಟು ಫಳಫಳ ಹೊಳೆಯೋ ಹಾಗೆ ಮಾಡೋಣ ಅಂತ ಆಲ್ವಾ . . .

ಈಗೆ… ನಾವೆಲ್ಲಾ ಯಾಮಾರಿ ಹೋಗೋದು, ಕುಕ್ಕರ್ ಅಲ್ಲಿ ಅನ್ನ, ಸಾಂಬಾರ್ ಮಾಡೋದು ಗೊತ್ತು, ಆದ್ರೆ ಚಿನ್ನ ಯಾರಾದ್ರೂ ಬಿಸಿ ಮಾಡ್ತಾರೇನ್ರಿ ? ಯಾರು ಮಾಡೋಲ್ಲ ಅಂತ ಹೇಳಬೇಡಿ, ಇಲ್ಲೊಬ್ಬಾಕೆ ಹಾಗೆ ಮಾಡಿ, ತನ್ನ ಚಿನ್ನವನ್ನೇ ಕಳ್ಕೊಂಡು ಗೋಳಾಡ್ತಾ ಇದ್ದಾಳೆ.

ಚಿತ್ತೂರಿನ ಮರಕಲಕುಪ್ಪಂ ದಲಿತವಾಡದ ಮಂಜುಲಾ (40) ರವರ ಮನೆಯ ಬಳಿ ಗುರುವಾರ ಬೆಳಿಗ್ಗೆ 10.30 ರ ಸುಮಾರಿಗೆ ಮೋಟಾರ್ ಸೈಕಲ್‌ನಲ್ಲಿ ಬಂದ ಅನಾಮಿಕರು ಚಿನ್ನ ಬೆಳ್ಳಿ ಸ್ವಚ್ಛ ಮಾಡ್ತೀವಿ, ಸಕತ್ ಹೊಳೆಯೊತರ ಮಾಡಿ, ಹೊಸದರಂತೆ ಮಾಡಿಕೊಡತ್ತೇವೆ ಎಂದಿದ್ದಾರೆ. ಅಪರಿಚಿತರಿಬ್ಬರೂ ಹಿಂದಿಯಲ್ಲಿ ಮಾತನಾಡುತ್ತಿದ್ದರು ಎಂದು ತಿಳಿದು ಬಂದಿದೆ..

ಮಂಜುಳ ಅವರನ್ನು ಕರೆದು ಚಿನ್ನ ಮತ್ತು ಬೆಳ್ಳಿ ವಸ್ತುಗಳು ಮತ್ತು ಆಭರಣಗಳನ್ನು ಸ್ವಚ್ಚಗೊಳಿಸುವುದಕ್ಕಾಗಿ ಹೇಳಿದ್ದಾರೆ. ಬೆಳ್ಳಂಬೆಳ್ಳಗೆ ಒಳ್ಳೆಯ ಮಿಕ ಬಲೆಗೆ ಬಿತ್ತು ಅಂತ, ಅವರು ಮೊದಲು ಕೊಟ್ಟ ಕಾಲ್ಗೆಜ್ಜೆಯನ್ನು ಸ್ವಚ್ಛ ಮಾಡಿ ಆಕೆಗೆ ನೀಡುತ್ತಾರೆ. ಅದನ್ನು ನೋಡಿದ ಆಕೆ ” ಅರೆ ಇದೇನು ಫಳಫಳ ಹೊಳಿತಾ ಇದೆಯಲ್ಲಾ” ಅಂತ ತನ್ನ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನೂ ಸಹ ಕೊಟ್ಟಿದ್ದಾಳೆ.

ಇದಕ್ಕೆ ಕಾಯ್ತಾ ಇದ್ದ ವಂಚಕರು, ” ಇದನ್ನು ಕುಕ್ಕರ್ ನಲ್ಲಿ ಇಟ್ಟು ಬಿಸಿ ಮಾಡಬೇಕು, ಅದು ತಣ್ಣಗಾದ ನಂತರ ನೋಡಿದ್ರೆ ನಿಮ್ಮ ಚಿನ್ನ ಹೊಸದರಂತೆ ಆಗಿರುತ್ತದೆ ಎಂದು ಹೇಳಿ , ಆಕೆ ಕೊಟ್ಟ ಸ್ವಲ್ಪ ದುಡ್ಡು ಪಡೆದು ಅಲ್ಲಿಂದ ಹೊರಟು ಹೋಗುತ್ತಾರೆ.

ಅವರು ಕುಕ್ಕರ್ ನಲ್ಲಿ ಆಕಿ ಕೊಟ್ಟಿದ್ದ ತನ್ನ ಸರವನ್ನು ಸ್ಟವ್ ಮೇಲೆ ಇಟ್ಟು ಬಿಸಿ ಮಾಡಿ, ತಣ್ಣಗಾಗುವವರೆಗೆ ಕಾದು ಕಾತುರದಿಂದ ಬಿಚ್ಚಿ ನೋಡಿ, ಅವಳ ಹ್ರದಯವೇ ನಿಂತಂತಾಗಿತ್ತು, ಕಾರಣ ಅದರಲ್ಲಿ ನೀರು ಬಿಟ್ರೆ , ಚಿನ್ನದ ಸರ ಇರಲೇ ಇಲ್ಲ. ಅದಾಗಲೇ ಆ ವಂಚಕರು ಅದನ್ನು ಎಗರಿಸಿ ಅಲ್ಲಿಂದ ಎಸ್ಕೇಪ್ ಆಗಿದ್ರು.

ಆಕೆಗೆ ಏನು ಮಾಡಬೇಕೆಂದು ತಿಳಿಯದೆ, ಕಿರುಚುತ್ತಾ ಊರೆಲ್ಲಾ ಸುತ್ತಿದ್ದಾಳೆ, ಕೊನೆಗೆ ಸಂಬಂಧಿಕರೊಂದಿಗೆ ವಂಚಕರಿಗಾಗಿ ಹುಡುಕಾಡಿದ್ದಾರೆ, ಆದರೆ ಅವರ ಸುಳಿವು ಸಿಗದೇ, ಪೊಲೀಸರ ಮೊರೆ ಹೋಗಿದ್ದಾಳೆ…..

ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸಲಾಗುತ್ತಿದೆ. ಇನ್ನಾದರೂ ಇಂತಹ ಅಪರಿಚರನ್ನು ನಂಬುವುದನ್ನು ಬಿಡುವುದು ಒಳ್ಳೆಯದು, ದುರಾದೃಷ್ಟವೆಂದರೆ, ಇಂತಹ ಎಷ್ಟೋ ಪ್ರಕರಣ ಬೆಳಕಿಗೆ ಬಂದರೂ ಇದೆ ರೀತಿ ಮೋಸ ಹೋಗುವವರು ಇನ್ನೂ ಇದ್ದಾರೆ.////

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button