Latest

ಕರಾವಳಿ ಕಡಲಲ್ಲಿ ತೇಲಿ ಬಂತು ಚಿನ್ನದ ತೇರು; ವಿಡಿಯೋ ನೋಡಿ

ಪ್ರಗತಿವಾಹಿನಿ ಸುದ್ದಿ; ಶ್ರೀಕಾಕುಳಂ: ಅಸನಿ ಚಂಡಮಾರುತದ ಅಬ್ಬರಕ್ಕೆ ಆಂಧ್ರಪ್ರದೇಶದಾದ್ಯಂತ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದು, ಈ ನಡುವೆ ಚಿನ್ನದ ತೇರೊಂದು ಕಡಲಿನಲ್ಲಿ ತೇಲಿ ಬಂದಿರುವ ಘಟನೆ ಶ್ರೀಕಾಕುಳಂ ಜಿಲ್ಲೆಯ ಸುನ್ನಪಲ್ಲಿ ಗ್ರಾಮದಲ್ಲಿ ನಡೆದಿದೆ.

ಕರಾವಳಿ ಕಡಲಲ್ಲಿ ತೇಲಿಬಂದ ಬಂಗಾರದ ರಥವನ್ನು ಕಂಡು ಗ್ರಾಮಸ್ಥರು ಅಚ್ಚರಿಗೊಂಡಿದ್ದಾರೆ. ಚಂಡಮಾರುತದ ಅಬ್ಬರಕ್ಕೆ ಸಮುದ್ರದಲ್ಲಿ ಬೃಹತ್ ಗಾತ್ರದ ಅಲೆಗಳು ಏಳುತ್ತಿದ್ದು, ಚಂಡಮಾರುತದ ಹೊಡೆತಕ್ಕೆ ಸಿಲುಕಿ ಥಾಯ್ಲಾಂಡ್ ಅಥವಾ ಮ್ಯಾನ್ಮಾರ್ ನಿಂದ ಈ ರಥ ಕಡಲ್ಲಲಿ ತೇಲಿ ಬಂದಿರಬಹುದು ಎಂದು ಹೇಳಲಾಗುತ್ತಿದೆ.

ಸಮುದ್ರದಲ್ಲಿ ತೇಲಿ ಬರುತ್ತಿರುವ ರಥದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸ್ಥಳೀಯ ಮೂನುಗಾರರು ರಥಕ್ಕೆ ಹಗ್ಗ ಕಟ್ಟಿ ರಥವನ್ನು ಸಮುದ್ರದಿಂದ ದಡಕ್ಕೆ ಎಳೆದು ತಂದಿದ್ದಾರೆ.

ಅಂಡಮಾನ್ ಸಮೀಪವಿರುವ ಯಾವುದಾದರೂ ಬೌದ್ಧ ಚೈತ್ಯಾಲಯದ ತೇರು ಇದಾಗಿರಬಹುದು, ಥಾಯ್ಲೆಂಡ್, ಮಲೇಷಿಯಾ, ಇಂಡೋನೇಷ್ಯಾದಿಂದ ಸಮುದ್ರದಲ್ಲಿ ಕೊಚ್ಚಿಕೊಂಡು ತೇರು ಬಂದಿರಬಹುದು ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾದ ಸಿಎಂ; ಭಾರಿ ಕುತೂಹಲ ಮೂಡಿಸಿದ ಚರ್ಚೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button