ಪ್ರಗತಿವಾಹಿನಿ ಸುದ್ದಿ; ಬೆಂಗಳೂರು; ಚಿನ್ನ, ಬೆಳ್ಳೆ ದರದಲ್ಲಿ ದೈನಂದಿನ ದರ ಬದಲಾವಣೆ ಸರ್ವೇಸಾಮಾನ್ಯ. ನಿನ್ನೆಯಿಂದ ಆಭರಣಗಳ ಬೆಲೆಯಲ್ಲಿ ಏರಿಕೆ ಕಂಡು ಬರುತ್ತಿದ್ದು, ಯಾವ ನಗರದಲ್ಲಿ ಎಷ್ಟಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 43,900 ರೂಪಾಯಿ ಇದೆ. 100 ಗ್ರಾಂ ಚಿನ್ನಕ್ಕೆ 4,39,000 ರೂ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ 1000 ರೂ.ನಷ್ಟು ಏರಿಕೆಯಾಗಿದೆ.
24 ಕ್ಯಾರೇಟ್ 10 ಗ್ರಾಂ ಚಿನ್ನಕ್ಕೆ 47,890 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,78,900 ರೂ ಆಗಿದೆ. ಬೆಳ್ಳಿದರದಲ್ಲಿ ಸ್ವಲ್ಪ ಏರಿಕೆ ಕಂಡುಬಂದಿದ್ದು, ಇಂದು ಬೆಳ್ಳಿ ದರದಲ್ಲಿ ಸ್ಥಿರತೆ ಕಂಡುಬಂದಿದ್ದು, ಕೆಜಿ ಬೆಳ್ಳಿಗೆ 61,200 ರೂಪಾಯಿ ಇದೆ.
ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 44,130 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,41,300 ರೂ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನ 48,140 ರೂ ಆಗಿದ್ದು, 100 ಗ್ರಾಂ ಚಿನ್ನ 4,81,400 ರೂ ಆಗಿದೆ. ಇನ್ನು ಕೆಜಿ ಬೆಳ್ಳಿ ಬೆಲೆ 65,200 ರೂ ಆಗಿದೆ.
ಇನ್ನು ದೆಹಲಿ, ಜೈಪುರ, ಮುಂಬೈ, ಹೈದರಾಬಾದ್ ಸೇರಿದಂತೆ ಎಲ್ಲಾ ಮಹಾನಗರಗಳಲ್ಲೂ ಚಿನ್ನ ಬೆಳಿ ದರದಲ್ಲಿ ಇಂದು ಏರಿಕೆಯಾಗಿದೆ.
ಸತತ 5ನೇ ದಿನವೂ ಬೆಲೆ ಏರಿಕೆ; 100 ದಾಟಿತು ಡಿಸೆಲ್ ದರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ