Latest

ಚಿನ್ನ, ಬೆಳ್ಳಿ ದರ ಇಂದು ಎಷ್ಟಿದೆ?

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು; ದಸರಾ, ವಿಜಯದಶಮಿ ಹಬ್ಬ ಮುಗಿಯುತ್ತಿದ್ದಂತೆ ಚಿನ್ನ, ಬೆಳ್ಳಿ ದರದಲ್ಲಿ ಬದಲಾವಣೆಯಾಗಿದೆಯೇ ಎಂಬ ಕುತೂಹಲ ಎಲ್ಲರಲ್ಲಿ ಮನೆ ಮಾಡಿರುತ್ತದೆ. ದೈನಂದಿನ ದರ ಬದಲಾವಣೆ ಸರ್ವೇಸಾಮಾನ್ಯ. ಇಂದು ಬಂಗಾರದ ಬೆಲೆ ಎಷ್ಟಿದೆ ಇಲ್ಲಿದೆ ಮಾಹಿತಿ.

ಕಳೆದ ಕೆಲ ದಿನಗಳಿಂದ ಚಿನ್ನ, ಬೆಳ್ಳಿ ದರದಲ್ಲಿ ಏರಿಕೆ ಕಂಡು ಬರುತ್ತಿದ್ದು, ಇಂದು ಕೂಡ ದೇಶಾದ್ಯಂತ ಚಿನ್ನದ ಬೆಲೆ ಏರಿಕೆಯಾಗಿದೆ. ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 46,970 ರೂಪಾಯಿ ಇದೆ. 24 ಕ್ಯಾರೇಟ್ 10 ಗ್ರಾಂ ಚಿನ್ನಕ್ಕೆ 48,070 ರೂಪಾಯಿ ಆಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 44,800 ರೂಪಾಯಿ ಇದೆ. 100 ಗ್ರಾಂ ಚಿನ್ನಕ್ಕೆ 4,48,000 ರೂ ನಿಗದಿಯಾಗಿದೆ. 24 ಕ್ಯಾರೇಟ್ 10 ಗ್ರಾಂ ಚಿನ್ನಕ್ಕೆ 48,870 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,88,700 ರೂ ಆಗಿದೆ.

ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 49,260 ರೂಪಾಯಿ ಹಾಗೂ ಮುಂಬೈನಲ್ಲಿ 48,070 ರೂ ಆಗಿದೆ. ಕೋಲ್ಕತ್ತಾದಲ್ಲಿ 49,950 ರೂಪಾಯಿ ಆಗಿದೆ.

ಬೆಳ್ಳಿ ದರದಲ್ಲಿಯೂ ಏರಿಕೆಯಾಗಿದ್ದು, ಬೆಂಗಳೂರಿನಲ್ಲಿ ಕೆಜಿ ಬೆಳ್ಳಿಗೆ 63,600 ರೂಪಾಯಿ ಆಗಿದೆ. ಮೈಸೂರು, ಮಂಗಳೂರು, ಮಧುರೈ, ಹೈದರಾಬಾದ್, ಚೆನ್ನೈ ಸೇರಿದಂತೆ ಹಲವೆಡೆಗಳಲ್ಲಿ ಕೆಜಿ ಬೆಳ್ಳಿಗೆ 67,700 ರೂಪಾಯಿ ಆಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button