Latest

ಇಂದು ಚಿನ್ನಾಭರಣಗಳ ದರ ಎಷ್ಟಿದೆ? ಇಲ್ಲಿದೆ ಮಾಹಿತಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು; ಆಭರಣ ಪ್ರಿಯರಿಗೆ ಹಬ್ಬದ ಸಂದರ್ಭದಲ್ಲಿ ಶುಭ ಸುದ್ದಿಯೊಂದು ಕಾದಿದೆ. ನವರಾತ್ರಿ ವಿಶೇಷ ಸಂದರ್ಭದಲ್ಲಿ ಚಿನ್ನ ಖರೀದಿಗೆ ಪ್ಲಾನ್ ಮಾಡುತ್ತಿರುವವರು ಈ ಸುದ್ದಿಯನ್ನು ನೋಡಲೇಬೇಕು.

ದೇಶದ ಎಲ್ಲಾ ಮಹಾನಗರಗಳಲ್ಲೂ ನವರಾತ್ರಿಯ ಮೊದಲ ದಿನವಾದ ಇಂದು ಚಿನ್ನದ ದರದಲ್ಲಿ ಕೊಂಚ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 43,600 ರೂಪಾಯಿ ಇದೆ. 100 ಗ್ರಾಂ ಚಿನ್ನಕ್ಕೆ 4,36,000 ರೂ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ 1500 ರೂ ಇಳಿಕೆ ಕಂದಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು ನೂರು ರೂ.ನಷ್ಟು ಏರಿಕೆ ಕಂಡಿದೆ.

24 ಕ್ಯಾರೇಟ್ 10 ಗ್ರಾಂ ಚಿನ್ನಕ್ಕೆ 47,560 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,75,600 ರೂ ಆಗಿದೆ. ಬೆಳ್ಳಿದರದಲ್ಲಿ ಸ್ವಲ್ಪ ಏರಿಕೆ ಕಂಡುಬಂದಿದ್ದು, ಕೆಜಿ ಬೆಳ್ಳಿಗೆ 60,700 ರೂಪಾಯಿ ಆಗಿದೆ.

ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 43,920 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,39,200 ರೂ ಆಗಿದೆ. ಸುಮಾರು ಸಾವಿರ ರೂಪಾಯಿ ಇಳಿಕೆ ಕಂಡಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನ 47,910 ರೂ ಆಗಿದ್ದು, 100 ಗ್ರಾಂ ಚಿನ್ನ 4,79,100 ರೂ ಆಗಿದೆ.
ದೇವಿಯರ ಹಬ್ಬ ನವರಾತ್ರಿ

Related Articles

Back to top button