Latest

ಚಿನ್ನ, ಬೆಳ್ಳಿ ಬೇಡಿಕೆ ಕುಸಿತ; ದರದಲ್ಲಿ ಏರಿಳಿತ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಭರಣ ಪ್ರಿಯರು ಒಡವೆಗಳ ಖರೀದಿಗೂ ನಿರಾಸಕ್ತರಾಗಿದ್ದಾರೆ. ಬೇಡಿಕೆ ಕಡಿಮೆಯಾಗಿದ್ದರೂ ಕೂಡ ಚಿನ್ನ, ಬೆಳ್ಳಿ ದರ ಮಾತ್ರ ಕಡಿಮೆಯಾಗಿಲ್ಲ. ಇಂದೂ ಕೂಡ ಬಂಗಾರ ಹಾಗೂ ಬೆಳ್ಳಿ ದರದಲ್ಲಿ ಕೊಂಚ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್ 1 ಗ್ರಾಂ ಚಿನ್ನದ ದರ ನಿನ್ನೆ 4,450 ರೂ ಇತ್ತು. ಇಂದು ಸ್ವಲ್ಪ ಏರಿಕೆಯಾಗಿದ್ದು, 4,460 ರೂ ಆಗಿದೆ. 10 ಗ್ರಾಂ ಚಿನ್ನದ ದರ ಇಂದು 44,600 ರೂ ಆಗಿದೆ.

24 ಕ್ಯಾರೆಟ್ 1 ಗ್ರಾಂ ಚಿನ್ನದ ದರ ನಿನ್ನೆ 4,866 ರೂ ಇದ್ದರೆ ಇಂದು 4,467 ರೂ ಆಗಿದೆ. 10ಗ್ರಾಂ ಗೆ ನಿನ್ನೆ 48,660 ರೂ ಇದ್ದರೆ ಇಂದು 48,670 ರೂ ಆಗಿದೆ.

ಇನ್ನು ಬೆಳ್ಳಿ ದರದಲ್ಲಿ ಇಂದು ಯಾವುದೇ ಬದಲಾವಣೆಯಾಗಿಲ್ಲ. ನಿನ್ನೆ 1 ಕೆ.ಜಿ ಬೆಳ್ಳಿ ದರ 71,500 ರೂ ಇತ್ತು. ಇಂದೂ ಕೂಡ ಅದೇ ದರ ಮುಂದುವರೆದಿದೆ.
ಹುಕ್ಕಾ ಬಾರ್ ಮೇಲೆ ದಾಳಿ; 20 ಜನರ ಬಂಧನ

Home add -Advt

Related Articles

Back to top button