Latest

ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ? ಬದಲಾವಣೆ ಏನು?

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ದೈನಂದಿನ ಬದಲಾವಣೆಯಲ್ಲಿ ಚಿನ್ನದ ದರದಲ್ಲಿ ಏರಿಳಿತ ಸಾಮಾನ್ಯ ಆದರೆ ಸಧ್ಯಕ್ಕೆ ಆಭರಣ ಪ್ರಿಯರಿಗೆ ಮತ್ತೆ ಮತ್ತೆ ಶಾಕ್ ಕಾದಿದೆ. ಇಂದು ಕೂಡ ಚಿನ್ನ-ಬೆಳ್ಳಿ ದರದಲ್ಲಿ ಮತ್ತೆ ಏರಿಕೆಯಾಗಿದೆ.

ಒಂದೇ ದಿನದಲ್ಲಿ ಚಿನ್ನದ ಬೆಲೆ 10 ಗ್ರಾಂ ಗೆ 440 ರೂ ಏರಿಕೆಯಾಗಿದೆ. ಇನ್ನು ಬೆಳ್ಳಿ ದರದಲ್ಲಿ ಕೂಡ ಭಾರಿ ಏರಿಕೆ ಕಂಡುಬಂದಿದ್ದು, ನಿನ್ನೆಗಿಂತ 700 ರೂಪಾಯಿ ಹೆಚ್ಚಳವಾಗಿದೆ. ಯಾವ ನಗರದಲ್ಲಿ ಚಿನ್ನ-ಬೆಳ್ಳಿ ದರ ಎಷ್ಟಿದೆ ಇಲ್ಲಿದೆ ಮಾಹಿತಿ.

ಬೆಂಗಳೂರಿನಲ್ಲಿ 22 ಕ್ಯಾರೆಟ್ 10ಗ್ರಾಂ ಚಿನ್ನದ ದರ 47,700 ರೂ ಆಗಿದ್ದರೆ, 24 ಕ್ಯಾರೆಟ್ ಚಿನ್ನದ ದರ 52,040 ರೂ ಆಗಿದೆ.

ಚೆನ್ನೈ ನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನ 48,830 ರೂ, ಹೈದರಾಬಾದ್ ನಲ್ಲಿ 47,700 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್ 10ಗ್ರಾಂ ಚಿನ್ನ 47,700 ರೂ, ದೆಹಲಿ- 47,700 ರೂ, ಕೊಲ್ಕತ್ತಾ- 47,700 ರೂ ಆಗಿದೆ.

24 ಕ್ಯಾರೆಟ್ 10 ಗ್ರಾಂ ಚಿನ್ನ ಚೆನ್ನೈನಲ್ಲಿ 53,270 ರೂ, ಮುಂಬೈ- 52,040 ರೂ, ದೆಹಲಿ- 52,040 ರೂ, ಕೊಲ್ಕತ್ತಾ- 52,040 ರೂ. ಹೈದರಾಬಾದ್ ನಲ್ಲಿ 52,040 ರೂ ಆಗಿದೆ.

ಭಾರತದಲ್ಲಿ ಇಂದು ಬೆಳ್ಳಿ ದರದಲ್ಲಿಯೂ ಏರಿಕೆಯಾಗಿದ್ದು, ಕೆಜಿ ಬೆಳ್ಳಿಗೆ ಬೆಂಗಳೂರು, ಮೈಸೂರು, ಮಂಗಳೂರಿನಲ್ಲಿ 72,500 ರೂ ಇದ್ದರೆ, ಚೆನ್ನೈನಲ್ಲಿ 72,500 ರೂ ಹಾಗೂ ಮುಂಬೈನಲ್ಲಿ 68,000 ರೂ ಇದೆ.
ಸ್ಯಾಂಡಲ್ ವುಡ್ ನಟ ಚೇತನ್ ಗೆ ಮತ್ತೊಂದು ಸಂಕಷ್ಟ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button