ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ದೈನಂದಿನ ವಹಿವಾಟಿನಲ್ಲಿ ಚಿನ್ನ-ಬೆಳ್ಳಿ ದರದಲ್ಲಿ ಬದಲಾವಣೆ ಸಾಮಾನ್ಯ. ಆದರೆ ಇಂದು ಚಿನ್ನದ ದರದಲ್ಲಿ ದಾಖಲೆ ಪ್ರಮಾಣದಲ್ಲಿ ಬದಲಾವಣೆ ಕಂಡುಬಂದಿದೆ.
ಉಕ್ರೇನ್ ಹಾಗೂ ರಷ್ಯಾ ಯುದ್ಧಗಳ ಇಫೆಕ್ಟ್ ಚಿನ್ನ-ಬೆಳ್ಳಿ ದರದ ಮೇಲೂ ಪರಿಣಾಮ ಬಿದ್ದಿದ್ದು, ಭಾರತದಲ್ಲಿ ಇಂದು ಕೂಡ ಚಿನ್ನದ ದರ ಏರಿಕೆಯಾಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನ 1,090 ರೂ. ಹೆಚ್ಚಳವಾಗುವ ಮೂಲಕ ಬಂಗಾರದ ಬೆಲೆ ದಾಖಲೆ ಬರೆದಿದೆ. ಹಲವು ರಾಜ್ಯಗಳಲ್ಲಿ ಬೆಳ್ಳಿಯ ಬೆಲೆ 1 ಕೆಜಿಗೆ 75,000 ದಾಟಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ 10ಗ್ರಾಂ ಚಿನ್ನದ ದರ 50,710 ರೂ ಆಗಿದ್ದರೆ, 24 ಕ್ಯಾರೆಟ್ ಚಿನ್ನದ ದರ 53,890 ರೂ ಆಗಿದೆ.
ಕೆಜಿ ಬೆಳ್ಳಿ ದರದಲ್ಲಿಯೂ ಭಾರಿ ಏರಿಕೆಯಾಗಿದ್ದು, ಬೆಂಗಳೂರು- 75,700 ರೂ ಆಗಿದೆ.
ಚೆನ್ನೈ ನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನ 50,710 ರೂ, ಹೈದರಾಬಾದ್ ನಲ್ಲಿ 50,710 ರೂ ಇದೆ. ದೆಹಲಿ- 49,400 ರೂ, ಕೊಲ್ಕತ್ತಾ- 49,400 ರೂ ಆಗಿದೆ.
24 ಕ್ಯಾರೆಟ್ 10 ಗ್ರಾಂ ಚಿನ್ನ ಚೆನ್ನೈ- 55,320 ರೂ, ಮುಂಬೈ- 53,890 ರೂ, ದೆಹಲಿ- 53,890 ರೂ, ಕೊಲ್ಕತ್ತಾ- 53,890 ರೂ, ಹೈದರಾಬಾದ್- 53,890 ರೂ, ಕೇರಳ- 53,890 ರೂ, ಪುಣೆ- 53,950 ರೂ, ಮಂಗಳೂರು- 53,890 ರೂ, ಮೈಸೂರು- 53,890 ರೂ. ಇದೆ.
ಕೆ ಜಿ ಬಿಳ್ಳಿಗೆ ಮೈಸೂರು- 75,700 ರೂ., ಮಂಗಳೂರು- 75,700 ರೂ., ಮುಂಬೈ- 71,000 ರೂ, ಚೆನ್ನೈ- 75,700 ರೂ ಆಗಿದೆ.
ಪೆಟ್ರೋಲ್-ಡೀಸೆಲ್ ದರ ಇಂದು ಎಷ್ಟಿದೆ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ