ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಅಕ್ಷಯ ತೃತೀಯದ ಬಳಿಕ ಇಂದು ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ದರ ಯಥಾಸ್ಥಿತಿ ಕಾಯ್ದುಕೊಂಡಿದೆ. ದೇಶದ ಮಹಾನಗರಗಳಲ್ಲಿಯೂ ಆಭರಣಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಚಿನ್ನ ಹಣದುಬ್ಬರದ ವಿರುದ್ಧ ಒಂದು ರಕ್ಷಣಾತ್ಮಕ ಬೇಲಿಯಾಗಿ ಕಾರ್ಯನಿರ್ವಹಿಸುತ್ತೆ ಎಂದೇ ಹೇಳಲಾಗುತ್ತದೆ. ಹೂಡಿಕೆದಾರರು ಚಿನ್ನವನ್ನು ಪ್ರಮುಖ ಹೂಡಿಕೆಯ ವಸ್ತುವಾಗಿ ಪರಿಗಣಿಸುತ್ತಾರೆ. ಅಲ್ಲದೇ ಒಂದು ಸುರಕ್ಷಿತ ಹೂಡಿಕೆಯಾಗಿರುತ್ತದೆ. ಈ ನಿಟ್ಟಿನಲ್ಲಿ ಚಿನ್ನದ ಮೇಲೆ ಹೂಡಿಕೆ ಮಹತ್ವದ್ದಾಗಿರುತ್ತದೆ.
ಚಿನ್ನ ಬೆಳ್ಳಿ ದರದಲ್ಲಿ ಇಂದು ಯಾವುದೇ ಬದಲಾವಣೆ ಇಲ್ಲದ ಕಾರಣ ನಿನ್ನೆಯ ದರವೆ ಮುಂದುವರೆದಿದೆ. ದೇಶದಲ್ಲಿ 22 ಕ್ಯಾರೆಟ್ 10ಗ್ರಾ ಚಿನ್ನ ಇಂದು 47,200 ರೂ ಇದೆ. 24 ಕ್ಯಾರೆಟ್ ಚಿನ್ನ 51,510 ರೂ ಇದೆ.
ರಾಜಧಾನಿ ಬೆಂಗಳೂರಿನಲ್ಲಿ ಬಂಗಾರದ ಬೆಲೆಯಲ್ಲಿ ಇಂದು ಯಾವುದೇ ಬದಲಾವಣೆಯಾಗಿಲ್ಲ. 22 ಕ್ಯಾರಟ್ 10 ಗ್ರಾಂ ಚಿನದ ದರ 47,200 ರೂ ಆಗಿದೆ. 24 ಕ್ಯಾರೆಟ್ ಚಿನ್ನದ ದರ 51,510 ರೂ ಇದೆ.
ಇನ್ನು ಹಲವು ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ದರ ಚೆನ್ನೈ- 48,160 ರೂ. ದೆಹಲಿ- 47,200 ರೂ, ಹೈದರಾಬಾದ್- 47,200 ರೂ, ಪುಣೆ – 47,280 ರೂ ಆಗಿದೆ. ಮೈಸೂರು 47,200 ರೂ ಇದೆ.
24 ಕ್ಯಾರೆಟ್ ಚಿನ್ನ ಚೆನ್ನೈ- 52,540 ರೂ, ದೆಹಲಿ- 51,510 ರೂ, ಕೊಲ್ಕತ್ತಾ- 51,510 ರೂ, ಹೈದರಾಬಾದ್- 51,510 ರೂ, ಪುಣೆ- 51,590 ರೂ.ಆಗಿದೆ. ಮೈಸೂರು-51,510 ರೂ ಆಗಿದೆ.
ಇಂದು ಭಾರತದಲ್ಲಿ ಬೆಳ್ಳಿದರ ಕೆಜಿಗೆ 63,500 ರೂ ಆಗಿದೆ. ದೇಶದ ಮಹಾನಗರಳಲ್ಲಿ ಬದಲಾವಣೆ ಕಂಡುಬಂದಿದ್ದು, ಬೆಂಗಳೂರಿನಲ್ಲಿ ಕೆಜಿ ಬೆಳ್ಳಿಗೆ 67,000 ರೂ ಆಗಿದೆ. ಮುಂಬೈ 62,300 ರೂ, ಚೆನ್ನೈನಲ್ಲಿ 67,000 ರೂ, ಮಂಗಳೂರು 67,600 ರೂ ಇದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ