ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೆಲ ದಿನಗಳಿಂದ ಏರಿಕೆ ಕಂಡಿದ್ದ ಚಿನ್ನಾಭರಣ ದರ ನಿನ್ನೆಯಿಂದ ಯಥಾಸ್ಥಿತಿ ಕಾಯ್ದುಕೊಂಡಿದೆ.
ಹಬ್ಬದ ಸಂದರ್ಭದಲ್ಲಿ ಚಿನ್ನಾಭರಣಗಳ ಖರೀದಿಗೆ ಇದು ಸೂಕ್ತ ಸಮಯ. ಇಂದು ಚಿನ್ನಾಭರಣ ದರದಲ್ಲಿ ಅಂತಹ ಯಾವುದೇ ಬದಲಾವಣೆಯಾಗಿಲ್ಲ. ಇಂದು ದೇಶದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 47,300 ರೂ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 52,845 ಆಗಿದೆ. ಆಭರಣ ಖರೀದಿಗೆ ಮುಂದಾಗುವವರು ಇಂದು ದೇಶದ ಯಾವ ನಗರದಲ್ಲಿ ಚಿನ್ನದ ದರ ಯಾವ ರೀತಿಯಾಗಿದೆ ಎಂಬ ಬಗ್ಗೆ ಮಾಹಿತಿ ತಿಳಿಯಿರಿ.
ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 47,300 ರೂಪಾಯಿ ನಿಗದಿಯಾಗಿದೆ. 24 ಕ್ಯಾರೆಟ್ ಚಿನ್ನ 51,600 ರೂಪಾಯಿ ಆಗಿದೆ.
ಇನ್ನು ಹಲವು ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ದರ ಚೆನ್ನೈ- 48,050 ರೂ. ಮುಂಬೈ- 47,300 ರೂ, ದೆಹಲಿ- 47,300 ರೂ, ಕೊಲ್ಕತ್ತಾ- 47,300 ರೂ, ಮೈಸೂರು- 47,300 ರೂ. ಆಗಿದೆ.
24 ಕ್ಯಾರೆಟ್ ಚಿನ್ನ ಚೆನ್ನೈ- 52,420 ರೂ, ಮುಂಬೈ- 51,600 ರೂ, ದೆಹಲಿ- 51,600 ರೂ, ಕೊಲ್ಕತ್ತಾ- 51,600 ರೂ, ಹೈದರಾಬಾದ್- 51,600 ರೂ, ಕೇರಳ- 51,600 ರೂ,
ಇಂದು ದೇಶದಲ್ಲಿ ಬೆಳ್ಳಿ ದರ ಕೂಡ ಇಳಿಕೆ ಆಗಿದ್ದು, ಕೆಜಿ ಬೆಳ್ಳಿಗೆ 68,900 ರೂಪಾಯಿ ಆಗಿದೆ. ಬೆಂಗಳೂರಿನಲ್ಲಿ ಕೆಜಿ ಬೆಳ್ಳಿಗೆ- 72,300 ರೂ ನಿಗದಿಯಾಗಿದೆ. ಚನ್ನೈನಲ್ಲಿಯೂ ಇದೇ ದರ ಇದ್ದು, ದೆಹಲಿಯಲ್ಲಿ ಕೆ ಜಿ ಬೆಳ್ಲಿಗೆ 68,000 ರೂ ನಿಗದಿಯಾಗಿದೆ.
ಸದ್ದಿಲ್ಲದೆ 25 ರೂ. ಏರಿದ ಡೀಸೆಲ್ ದರ, ಜನಸಾಮಾನ್ಯರಿಗೆ ಬಿಸಿ ತಟ್ಟಿಲ್ಲ !
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ