*ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ: ಹುತಾತ್ಮ ಅರಣ್ಯಾಧಿಕಾರಿಗಳಿಗೆ ಶ್ರದ್ಧಾಂಜಲಿ*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ-2023ರ ಅಂಗವಾಗಿ ನಾಗರಗಾಳಿ ಉಪ ವಿಭಾಗದ ವತಿಯಿಂದ ಗೋಲಿಹಳ್ಳಿ ವಲಯ ಕಚೇರಿ ಆವರಣದಲ್ಲಿ ಹುತಾತ್ಮ ಅರಣ್ಯಾಧಿಕಾರಿಗಳಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಗರಗಾಳಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಲ್ಲಿನಾಥ ಬಿ ಕುಸನಾಳ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜೆ ಎಂ ಎಫ್ ಸಿ ಸಿವಿಲ್ ನ್ಯಾಯಾಧೀಶರಾದ ಜರಿನಾ ಮತ್ತು ಅತಿಥಿಗಳಾಗಿ ಜೆ.ಎಂ.ಎಫ್.ಸಿ ಖಾನಾಪೂರ ಪ್ರಧಾನ ನ್ಯಾಯಾಧಿಶ ಸೂರ್ಯನಾರಾಯಣ ಎನ್ ಭಾಗವಹಿಸಿದ್ದರು. ಈ ವೇಳೆ ಗೋಲಿಹಳ್ಳಿ ವಲಯ ಅರಣ್ಯ ಅಧಿಕಾರಿ ವಾಣಿಶ್ರೀ ಹೆಗಡೆ, ನಾಗರಗಾಳಿ ವಲಯ ಅರಣ್ಯ ಅಧಿಕಾರಿ ಪ್ರಶಾಂತ ಮಂಗಸುಳಿ, ನಾಗರಗಾಳಿ ಉಪ ವಿಭಾಗದ ಎಲ್ಲ ಉಪ ವಲಯ ಅರಣ್ಯಾಧಿಕಾರಿಗಳು, ಗಸ್ತು ಅರಣ್ಯ ವನಪಾಲಕರು, ಅರಣ್ಯ ವೀಕ್ಷಕರು, ಕ್ಷೇಮಾಭಿವೃದ್ಧಿ ನೌಕರರು ಹಾಜರಿದ್ದರು.
ವನ್ಯಜೀವಿ ಹಾಗೂ ಅರಣ್ಯ ಸಂಪತ್ತು ಸಂರಕ್ಷಣೆಗಾಗಿ ತಮ್ಮ ಪ್ರಾಣವನ್ನು ಅರ್ಪಿಸಿದಂತಹ ಅರಣ್ಯ ಅಧಿಕಾರಿಗಳಾದ ದಿವಂಗತ ಎಂ ಬಿ ರಂಗನಗೌಡ ವಲಯ ಅರಣ್ಯ ಅಧಿಕಾರಿ, ದಿವಂಗತ ಹಂಪಯ್ಯ ಅರಣ್ಯ ರಕ್ಷಕ, ದಿವಂಗತ ಬಸವಣ್ಣೆ ದೊಡ್ಡಬಸಪ್ಪ ಉಪ ವಲಯ ಅರಣ್ಯಾಧಿಕಾರಿ, ದಿವಂಗತ ನಜೀರ ಅರಣ್ಯ ರಕ್ಷಕ ರಂತಹ ಅರಣ್ಯ ಹುತಾತ್ಮರನ್ನು ಸ್ಮರಿಸಿ ಅವರಿಗೆ ಭಾವಪೂರ್ವ ಶ್ರದ್ದಾಂಜಲಿಯನ್ನು ಕೋರಲಾಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ