
ಪ್ರಗತಿವಾಹಿನಿ ಸುದ್ದಿ: ವಿಮಾನದಲ್ಲಿ ಇರುಮುಡಿ ತೆಗೆದುಕೊಂಡು ಹೋಗಲು ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಇದರಿಂದ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಸಿಹಿ ಸುದ್ದಿ ಸಿಕ್ಕಂತಾಗಿದೆ.
ನವಂಬರ್ ತಿಂಗಳು ಶುರುವಾಗುತ್ತಿದ್ದಂತೆ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಶಬರಿಮಲೆಗೆ ಹೋಗುವ ಜನರ ಸಂಖ್ಯೆ ಹೆಚ್ಚಾಗುತ್ತದೆ. ಇಷ್ಟು ದಿನ ವಿಮಾನದಲ್ಲಿ ಇರುಮುಡಿಗೆ ಅವಕಾಶ ಇಲ್ಲದಿದ್ದು, ಇದೀಗ ವಿಮಾನದಲ್ಲಿ ಇರುಮುಡಿ ತೆಗೆದುಕೊಂಡು ಹೋಗಲು ನಾಗರಿಕ ವಿಮಾನಯಾನದಿಂದ ಅನುಮತಿ ಸಿಕ್ಕಿದೆ.
ಜನರು ಶಬರಿಮಲೆಗೆ ಹೋಗಲು ರೈಲ್ವೆ, ಬಸ್ ನಂತಹ ಸಂಚಾರ ಮಾರ್ಗವನ್ನು ಬಳಸುತ್ತಾರೆ. ಆದರೆ ಇದೀಗ ಅತಿ ಸುಲಭವಾಗಿ ವಿಮಾನದಲ್ಲಿ ಇರುಮಡಿಯೊಂದಿಗೆ ಶಬರಿಮಲೆಗೆ ಹೋಗಬಹುದಾಗಿದೆ. ಮಂಡಲ ಪೂಜೆ, ಮಕರ ಸಂಕ್ರಾಂತಿ ಹಿನ್ನೆಲೆ ಇರುಮುಡಿಯನ್ನು ವಿಮಾನದಲ್ಲಿ ತೆಗೆದುಕೊಂಡು ಹೋಗಲು ನಾಗರಿಕ ವಿಮಾನಯಾನದಿಂದ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಇರುಮುಡಿ ಪರಿಶೀಲನೆ ಹಾಗೂ ಸ್ಕ್ಯಾನಿಂಗ್ ಮಾಡಿ ಭದ್ರತಾ ಪರಿಶೀಲನೆ ಒಳಪಟ್ಟು ಇರುಮುಡಿ ಜೊತೆಗೆ ಹೋಗಲು ಭಕ್ತರಿಗೆ ಅವಕಾಶ ನೀಡಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ